ಆನಂದಪುರ:- ಸ್ಥಳೀಯ ಬಸವನ ಬೀದಿಯ ಇತಿಹಾಸ ಪ್ರಸಿದ್ಧವಾದ ಶ್ರೀ ವೀರಾಂಜನೇಯ ಸ್ವಾಮಿಯ ಮಹಾ ರಥೋತ್ಸವ ಮಂಗಳವಾರ ವೈಭವದಿಂದ ಜರುಗಿತು.
ಬೆಳಗ್ಗೆಯಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದ್ದು. ಮಧ್ಯಾಹ್ನ 12:30 ಕ್ಕೆ ಶ್ರೀ ವೀರಾಂಜನೇಯ ಸ್ವಾಮಿಯ ರತರೋಹಣ ನೆರವೇರಿತು.

ಮಧ್ಯಾಹ್ನ 3 ಗಂಟೆಗೆ ವೀರಾಂಜನೇಯ ಸ್ವಾಮಿಯ ರಥೋತ್ಸವ ವಿವಿಧ ವಾದ್ಯಗಳು ರಾಜಭೀದಿಯ ಮೆರವಣಿಗೆ ನೆರವೇರಿತು. ಆಗಮಿಕರಾದ ಶ್ರೀಧರ್ ಭಟ್ರು ಕೆಂಜಗಾಪುರ ಇವರ ಆಚಾರತ್ವದಲ್ಲಿ ನೆರವೇರಿದೆ.
ಬುಧವಾರ ಬೆಳಗ್ಗೆ ಇಕ್ಷಾ ಕಂಡ ಮಹಾಯಾಗ ಮತ್ತು ರಾಮ ತಾರಕ ಮಹಾಯಾಗ ಸಹ ನೆರವೇರಿದ್ದು ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಂಗಾರ ಮಕ್ಕಿಯ ಮಾರುತಿ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
✒️…ಅಮಿತ್ ಆರ್ ಆನಂದಪುರ









