ಮನೆ ಶಿವಮೊಗ್ಗ ಅದ್ದೂರಿಯಾಗಿ ಜರುಗಿದ ವರಸಿದ್ಧಿ ವಿನಾಯಕನ ಬ್ರಹ್ಮರಥೋತ್ಸವ..!!

ಅದ್ದೂರಿಯಾಗಿ ಜರುಗಿದ ವರಸಿದ್ಧಿ ವಿನಾಯಕನ ಬ್ರಹ್ಮರಥೋತ್ಸವ..!!

42
0

ಆನಂದಪುರ ಸಮೀಪದ ಎಡೇಹಳ್ಳಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಇಂದು ನಡೆಯಿತು.

ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಜಾತ್ರಾ ಮಹೋತ್ಸವ ಬುಧವಾರದಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು ಇಂದು ಸಾಮೂಹಿಕ ಗಣ ಹೋಮ ಹಾಗೂ ಧಾರ್ಮಿಕ ಕಾರ್ಯಗಳ ನಂತರ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.

ಸುತ್ತಮುತ್ತಲಿನ ಅನೇಕ ಭಕ್ತಾದಿಗಳು ಶ್ರೀ ದೇವರ ರಥೋತ್ಸವದಲ್ಲಿ ಬಾಗಿ ಯಾಗಿದ್ದರು.ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.

ಇಂದು ಸಂಜೆ ಶ್ರೀ ದೇವರಿಗೆ ರಂಗ ಪೂಜೆಯ ಕಾರ್ಯಕ್ರಮ ನಡೆಯಲಿದೆ ಹಾಗೂ ನಾಳೆ ಶುಕ್ರವಾರ ಶ್ರೀ ದೇವರ ಅವಬೃತ ಸ್ನಾನ, ಪೂಜಾ ಧಾರ್ಮಿಕ ಕಾರ್ಯಗಳು ನಡೆದ ನಂತರ ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಜಾತ್ರೆ ತೆರೆ ಕಾಣಲಿದೆ.

✒️..ಅಮಿತ್ ಆರ್ ಆನಂದಪುರ