ಸಾಗರ: “ಸಾಗರ್ ಯೂತ್ ಫೋರ್ಸ್ ಅಸೋಸಿಯೇಷನ್” ಈ ವರ್ಷದ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಭವ್ಯ ಪಥಸಂಚಲನದಲ್ಲಿ ಭಾಗವಹಿಸಿ, ಕರ್ನಾಟಕವನ್ನು ಪ್ರತಿನಿಧಿಸಿ ದೇಶವ್ಯಾಪಿ ಗಮನ ಸೆಳೆದಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ, ಹಾಗೂ ಮುಖ್ಯ ಅತಿಥಿಗಳಾದ ಯುರೋಪ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೋ ಕೊಸ್ಟಾ ಮತ್ತು ಯುರೋಪ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಅವರ ಸಮ್ಮುಖದಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಹೆಜ್ಜೆ ಹಾಕುವ ಮೂಲಕ ತಂಡವು ಕರ್ನಾಟಕದ ಸಂಸ್ಕೃತಿ ಹಾಗೂ ಹಿರಿಮೆಯನ್ನು ಹೆಮ್ಮೆಯಿಂದ ಪ್ರದರ್ಶಿಸಿದೆ.

ಸಾಗರ ಯೂತ್ ಫೋರ್ಸ್ ತಂಡದ ಅಧ್ಯಕ್ಷರಾದ ಪುಷ್ಪಲತಾ ಬಸವರಾಜ್, ಕಾರ್ಯದರ್ಶಿ ಭಾರತಿ ಎಸ್. (ಆನಂದಪುರ), ಪಟ್ಲ ಫೌಂಡೇಶನ್‌ನ ಸತೀಶ್, ಹಾಗೂ ಮಲೆನಾಡು ವಾಯ್ಸ್ ಪತ್ರಿಕೆಯ ನಗರ ರಾಘವೇಂದ್ರ ಅವರು ತಂಡದ ಸಂಪೂರ್ಣ ಉಸ್ತುವಾರಿಯನ್ನು ಹೊತ್ತು, ಒಟ್ಟು 36 ಕಲಾವಿದರನ್ನು ಮುನ್ನಡೆಸಿದರು.
ಸಾಗರ, ಹೊಸನಗರ ಹಾಗೂ ಸುತ್ತಮುತ್ತಲಿನ ಕಾಲೇಜುಗಳ ವಿದ್ಯಾರ್ಥಿಗಳು ಕರ್ನಾಟಕದ ಜಾನಪದ ಪರಂಪರೆಯನ್ನು ಪ್ರತಿಬಿಂಬಿಸುವ ಡೊಳ್ಳುಕುಣಿತ, ಪೂಜಾ ಕುಣಿತ ಮತ್ತು ಯಕ್ಷಗಾನ ಕಲಾರೂಪಗಳನ್ನು ಅತ್ಯಂತ ಮನಮೋಹಕವಾಗಿ ಪ್ರದರ್ಶಿಸಿ, ನೆರೆದಿದ್ದ ಪ್ರೇಕ್ಷಕರ ಮನ ಗೆದ್ದರು.
ಡೊಳ್ಳುಕುಣಿತ ತಂಡವು ಭಾರತದ ವಿವಿಧ ರಾಜ್ಯಗಳ ವಾದ್ಯವೃಂದಗಳ ಪಥಸಂಚಲನಕ್ಕೆ ಮುನ್ನಡೆ ನೀಡಿದ್ದು, ಪಥಸಂಚಲನಕ್ಕೆ ವಿಶೇಷ ಶೋಭೆ ತಂದಿತು. ನಂತರ ಪೂಜಾ ಕುಣಿತ ಹಾಗೂ ಯಕ್ಷಗಾನ ಪ್ರದರ್ಶನಗಳು ನಡೆದವು.
ವಿವಿಧ ದಳಗಳ ಪಥಸಂಚಲನದ ಅಂತ್ಯದಲ್ಲಿ ‘ವಂದೇ ಮಾತರಂ’ ಗೀತೆಗೆ ತಂಡ ಹೆಜ್ಜೆ ಹಾಕಿದ ಕ್ಷಣ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಯಿತು.

🎭 ಯಕ್ಷಗಾನದಲ್ಲಿ ಭಾಗವಹಿಸಿದ ಕಲಾವಿದರು:
ಭಾರತಿ, ಧನುಷ್, ಶ್ರೀನಿವಾಸ್, ಆಶಿಕ್, ಹೇಮಂತ್, ಸಿಂಚನಾ ಎಂ, ಶ್ರೀಯಾ, ಸಿಂಚನಾ ಎ, ನಾಗವೆಣಿ, ಶ್ರುತಿ, ಸುಕ್ಷಿತಾ, ಆಕ್ಷತಾ.
🥁 ಡೊಳ್ಳುಕುಣಿತದಲ್ಲಿ ಭಾಗವಹಿಸಿದ ಕಲಾವಿದರು:
ಪುಷ್ಪಲತಾ (ಸಾಗರ ಯೂತ್ ಫೋರ್ಸ್ ಅಧ್ಯಕ್ಷೆ), ಅಭಿಷೇಕ್, ಸುಬ್ರಹ್ಮಣ್ಯ, ಹರ್ಷ, ಅಭಿಷೇಕ್ ಆರ್. ನಾಯಕ್, ಶರಶ್ಚಂದ್ರ, ಅಕ್ಷಯ್ ಕುಮಾರ್, ತಿಲಕ್ ಕುಮಾರ್, ಶೋಭಾ, ಸುದಾ, ಚಂದನಾ, ಮೈತ್ರಿ.
💃 ಪೂಜಾ ಕುಣಿತದಲ್ಲಿ ಭಾಗವಹಿಸಿದ ಕಲಾವಿದರು:
ಬಸವರಾಜ್, ರಕ್ಷಾ, ಪ್ರಗುಣ, ಅನನ್ಯಾ, ತೇಜಸ್ವಿನಿ, ಪ್ರಜ್ಞಾ, ಕಾವೇರಿ, ಅಕ್ಷಯ್, ಸೂರ್ಯ ಪ್ರಕಾಶ್, ಆದಿತ್ಯ, ಸಾನ್ವಿಕ್, ಚೇತನ್.
ಈ ರೀತಿ ಒಟ್ಟು 36 ಕಲಾವಿದರು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿ, ನಮ್ಮ ಮಲೆನಾಡಿನ ಸಂಸ್ಕೃತಿ, ಪರಂಪರೆ ಮತ್ತು ಹಿರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಮೆರೆದಿದ್ದಾರೆ.
✒️..ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









