ಮನೆ ಶಿವಮೊಗ್ಗ ಗಣರಾಜ್ಯೋತ್ಸವ ಹಬ್ಬವಲ್ಲ, ಅದು ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನ: ರಾಜೇಂದ್ರ ಗೌಡ್ರು..!!

ಗಣರಾಜ್ಯೋತ್ಸವ ಹಬ್ಬವಲ್ಲ, ಅದು ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನ: ರಾಜೇಂದ್ರ ಗೌಡ್ರು..!!

48
0

ಆನಂದಪುರ:ನಮ್ಮ ದೇಶವನ್ನು ಸರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪಿಸುವಲ್ಲಿ ಸಂವಿಧಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕನ್ನಡ ಯುವಕ ಸಂಘದ ಗೌರವಾಧ್ಯಕ್ಷ ರಾಜೇಂದ್ರ ಗೌಡ್ರು ತಿಳಿಸಿದರು.

ಇವರು 76ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಕನ್ನಡ ಯುವಕ ಸಂಘದಲ್ಲಿ ಹಮ್ಮಿ ಕೊಂಡಿದ್ದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಗಣರಾಜ್ಯೋತ್ಸವವು ಕೇವಲ ಹಬ್ಬವಲ್ಲ, ಅದು ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನವೂ ಆಗಿದೆ. ಈ ದೇಶದ ಕಾನೂನುಗಳನ್ನು ಗೌರವಿಸುವುದು, ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವದ ಭರವಸೆಯನ್ನು ನೀಡಿದೆ. ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗಣರಾಜ್ಯೋತ್ಸವದ ಅರ್ಥ ಸಾರ್ಥಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಧ್ವಜಾರೋಹಣ ಸಮಯದಲ್ಲಿ ಮಾಜಿ ಅಧ್ಯಕ್ಷರು ಎನ್ ಉಮೇಶ್,ಜಗನ್ನಾಥ್, ಕಾರ್ಯದರ್ಶಿ ಮಧುಕರ್ ನಾಯಕ್,ಖಜಾಂಚಿ ಅಶ್ವಿನ್ ಗೌಡ, ಸದ್ಯಸ್ಯರಾದ ರಮೇಶ್ ಶೆಟ್ಟಿ,ವಿನೋದ,ಸುಮಿತ್ ಇನ್ನಿತರರು ಪಾಲ್ಗೊಂಡಿದ್ದರು.

✒️….ಅಮಿತ್ ಆರ್ ಆನಂದಪುರ