Home Blog ಆನಂದಪುರದಲ್ಲಿ ಹಿಂದೂ ಸಂಗಮ..!!

ಆನಂದಪುರದಲ್ಲಿ ಹಿಂದೂ ಸಂಗಮ..!!

126
0

ಆನಂದಪುರದ ಶ್ರೀ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ 2026ರ ಫೆಬ್ರವರಿ 2ರಂದು (ಸೋಮವಾರ) ಬೆಳಿಗ್ಗೆ 11 ಗಂಟೆಗೆ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಶ್ರೀ ಗುತ್ಯಮ್ಮ ದೇವಸ್ಥಾನದಿಂದ ವಿವಿಧ ಕಲಾತಂಡಗಳೊಂದಿಗೆ ಸಂಕೀರ್ತನೆ ಯೊಂದಿಗೆ ಶೋಭಾಯಾತ್ರೆ ಆರಂಭವಾಗಿ, ಶ್ರೀ ಮಾರಿಕಾಂಬ ದೇವಸ್ಥಾನದವರೆಗೆ ನಡೆಯಲಿದೆ.

ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಧರ್ಮ ರಕ್ಷಾ ಸಮಿತಿಯ ಅಧ್ಯಕ್ಷರಾದ ಸತ್ಯನಾರಾಯಣ, ಮುಖಂಡರಾದ ಶಂಕರ್ ನಾಯಕ್, ಮಧುಸೂದನ್ ಬೇಕಲ್, ಧರ್ಮರಕ್ಷಾ ಸಮಿತಿ ಪ್ರಮುಖರಾದ ಗಣಪತಿ ಯಡೆಹಳ್ಳಿ, ವೆಂಕಟೇಶ್ ಚಂದಹಳ್ಳಿ, ರವಿಕುಮಾರ್ ಬಿ.ಡಿ., ಗೋಪಾಲ್ ಹಾಗೂ ಮಂಜುನಾಥ್ ಅವರು ತಿಳಿಸಿದ್ದಾರೆ.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ