ಮನೆ Blog ಅರಣ್ಯ ಅಧಿಕಾರಿಗಳ ದಬ್ಬಾಳಿಕೆ ವಿರುದ್ಧ ಯಡಮನೆಯಲ್ಲಿ ರೈತರ ಪರ ನಿಂತ ಮಲ್ಲಿಕಾರ್ಜುನ ಹಕ್ರೆ..!!

ಅರಣ್ಯ ಅಧಿಕಾರಿಗಳ ದಬ್ಬಾಳಿಕೆ ವಿರುದ್ಧ ಯಡಮನೆಯಲ್ಲಿ ರೈತರ ಪರ ನಿಂತ ಮಲ್ಲಿಕಾರ್ಜುನ ಹಕ್ರೆ..!!

49
0

ಸಾಗರ/ ಇಂದು ಶುಕ್ರವಾರದಂದು ಚೆನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಮನೆಯಲ್ಲಿ 50-60 ವರ್ಷಗಳಿಂದ ವಾಸವಿರುವ ರೈತರನ್ನು ಒಕ್ಕಲೆಬ್ಬಿಸುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಹಕ್ರೆಯವರು ಅಧಿಕಾರಿಗಳನ್ನು ಮನವೊಲಿಸಿ ತಡೆದರು.

ಕಟ್ಟಿನಕಾರು ಗ್ರಾಮದ ಯಡಮನೆ ರೈತರ ಹಕ್ಕುಗಳನ್ನು ಮೊದಲು ಮಾನ್ಯ ಮಾಡಿ ಆ ರೈತರಿಗೆ ಪರಿಹಾರ ನೀಡಬೇಕು, ಇನ್ನೂ ರೈತರ ಹಕ್ಕುಗಳು ಮಾನ್ಯವಾಗದೆ ಒಕ್ಕಲೆಬ್ಬಿಸುತಿರುವ ಸರ್ಕಾರದ ನಡತೆಯನ್ನು ವಿರೋಧಿಸಿ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದಾಖಲಾತಿಗಳನ್ನು ನೀಡಿ ಒಕ್ಕಲೆಬ್ಬಿಸಲು ಮುಂದಾದರೆ ಹೋರಾಟದ ಎಚ್ಚರಿಕೆಯನ್ನು ಕೊಟ್ಟರು.

ಈ ಸಂದರ್ಭದಲ್ಲಿ ಬಿ ಸಿ ಲಕ್ಷ್ಮೀನಾರಾಯಣ, ನವೀನ ದಾರಿಗದ್ದೆ, ಲೋಲಾಕ್ಷಿ ಜಿನದತ್ತ ಹೆಗ್ಗದ್ದೆ, ಪಾರ್ಶ್ವನಾಥ ಕಟ್ಟಿನಕಾರು, ಚಂದ್ರಹಾಸ ಕೊಗಾರ್,ನಾಗರಾಜ್ ವಾಟೆಮಕ್ಕಿ, ಶ್ರೀಧರ ಚುಟ್ಟಿಕೆರೆ ಹಾಗೂ ಯಡಮನೆ ಗ್ರಾಮಸ್ಥರು ಸ್ಥಳದಲ್ಲಿದ್ದರು.

✒️…ವರದಿ.ಕೆ ಸಿ ರಾಜು ಕಾರಣಿ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t