ಮನೆ ಶಿವಮೊಗ್ಗ ಸಾಲಬಾದೆ ತಾಳಲಾಗದೆ ರೈತ ಆತ್ಮಹತ್ಯೆ..!!

ಸಾಲಬಾದೆ ತಾಳಲಾಗದೆ ರೈತ ಆತ್ಮಹತ್ಯೆ..!!

41
0

ಆನಂದಪುರ :ಸಾಲ ಬಾದೆ ತಾಳಲಾಗದೆ ರೈತ ಮಾವಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆನಂದಪುರ ಸಮೀಪದ ಬಳ್ಳಿ ಬೈಲು ನಿವಾಸಿಯಾದ ಮೃತ ಗೋಪಾಲ ಎಂ. (56) ಮೂಲತಹ ರೈತಾಪಿ ಕುಟುಂಬದವರಾಗಿದ್ದು ಸಾಲಬಾಧೆ ತಾಳಲಾಗದೆ ಗುರುವಾರ ಸಂಜೆ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ಗೋಪಾಲ ರವರಿಗೆ 03 ಎಕರೆ ಜಮೀನಿದ್ದು, 02 ವರ್ಷಗಳ ಹಿಂದೆ ಎಸ್.ಬಿ.ಐ ಬ್ಯಾಂಕಿನಲ್ಲಿ 04 ಲಕ್ಷ ರೂ ಕೃಷಿ ಸಾಲ ಮಾಡಿ ಅಡಿಕೆ ಸಸಿ ನೆಟ್ಟಿರುತ್ತಾರೆ. ಮತ್ತು ಮೈಕ್ರೋ ಫೈನಾನ್ಸ್ ನಲ್ಲಿ 50,000 ರೂ ಹಾಗೂ ಸಣ್ಣಪುಟ್ಟ ಕೈಸಾಲ ಸಹ ಮಾಡಿಕೊಂಡಿದ್ದು ಸಾಲ ತೀರಿಸುವ ಆಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ