ಮನೆ ಶಿವಮೊಗ್ಗ ದುರ್ಗಾಂಬಾ ದೇವಿ ಕೃಪೆಯಿಂದ ಮಂತ್ರಿಯಾಗುವ ಆಸೆ: ಶಾಸಕ ಗೋಪಾಲಕೃಷ್ಣ ಬೇಳೂರು

ದುರ್ಗಾಂಬಾ ದೇವಿ ಕೃಪೆಯಿಂದ ಮಂತ್ರಿಯಾಗುವ ಆಸೆ: ಶಾಸಕ ಗೋಪಾಲಕೃಷ್ಣ ಬೇಳೂರು

41
0

ಆನಂದಪುರ:ಹಿರೇಹಾರಕದ ದುರ್ಗಾಂಬಾ ದೇವಿ ಅತ್ಯಂತ ಶಕ್ತಿಶಾಲಿ ದೇವಿಯಾಗಿದ್ದಾರೆ. ನಾನು ಆದಷ್ಟು ಬೇಗ ಮಂತ್ರಿಯಾಗುವ ಭಾಗ್ಯ ಕರುಣಿಸಲಿ ಎಂದು ತಾಯಿಗೆ ಬೇಡಿಕೊಂಡಿದ್ದೇನೆ” ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಆನಂದಪುರ ಸಮೀಪದ ಹಿರೇಹಾರಕ ಗ್ರಾಮದಲ್ಲಿ ನಡೆದ ದುರ್ಗಾಂಬಾ ದೇವಿ ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಮಾತನಾಡಿದರು.

“ದುರ್ಗಾಂಬಾ ದೇವಿಯ ಕೃಪೆಯಿಂದ ಈ ಗ್ರಾಮದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲಸಲಿ. ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ; ಇದು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಐಕ್ಯತೆಯ ಸಂಕೇತವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.

ದೇಶಕ್ಕೆ ಯಾವುದೇ ಕಳಂಕ ಬರದಂತೆ, ಕೊರೋನಾ ಮಹಾಮಾರಿ ಮತ್ತೆ ಕಾಣಿಸಿಕೊಳ್ಳದಂತೆ ತಾಯಿ ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥಿಸಿದ ಅವರು, ದೇವಿಯ ಹೆಸರಲ್ಲಿ ಸಭಾಭವನ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆಯನ್ನೂ ವ್ಯಕ್ತಪಡಿಸಿದರು.

ಗ್ರಾಮದ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಾವು ಸದಾ ಗ್ರಾಮಸ್ಥರೊಂದಿಗಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲ್ಲಿ, ಜಾಕಿರ್ , ರಮಾನಂದ ಹಾಗೂ ದುರ್ಗಾಂಬ ಸೇವಾ ಸಮಿತಿಯ ಅಧ್ಯಕ್ಷರಾದ ದಿವಾಕರ್ ,ಕಾರ್ಯದರ್ಶಿ ಚೌಡಪ್ಪ,ಪೂಜಾರಿ ಜಗನ್ನಾಥ್,ಮಂಜಪ್ಪ , ಹಾಗೂ ಪ್ರಮುಖರಾದ ಅಣ್ಣಪ್ಪ, ಯೋಗೇಂದ್ರ ,ಸೋಮಪ್ಪ, ಮಂಜುನಾಥ , ಕರಿಯಪ್ಪ, ಭದ್ರಪ್ಪ. ಮಂಜುನಾಥ್,ಟಾಕಪ್ಪ ದೇವೇಂದ್ರಪ್ಪ.ನಾರಾಯಣ ಮೂರ್ತಿ,ನಾಗರಾಜ , ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ