ಮನೆ Blog ಮಕ್ಕಳು ಮೊಬೈಲ್ ಬಳಕೆ ನಿಷೇದ,ಸರ್ಕಾರದ ಐತಿಹಾಸಿ ನಿರ್ಧಾರ..!!

ಮಕ್ಕಳು ಮೊಬೈಲ್ ಬಳಕೆ ನಿಷೇದ,ಸರ್ಕಾರದ ಐತಿಹಾಸಿ ನಿರ್ಧಾರ..!!

37
0

ಪ್ರಸ್ತುತ ದಿನಗಳಲ್ಲಿ ಮೊಬೈಲ್ ಇಲ್ಲದ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ಬಂದಿದ್ದೇವೆ. ಅದರಲ್ಲೂ ಮೊಬೈಲ್ ಸುತ್ತ ಮಕ್ಕಳ ಬದುಕನ್ನು ಸುತ್ತವಂತೆ ಮಾಡಿರುವುದು ವಿಪರ್ಯಾಸದ ಸಂಗತಿಯಾಗಿದೆ.


ಕೆಲವು ವರ್ಷಗಳ ಹಿಂದೆ ಮಕ್ಕಳನ್ನು ಜೋಗುಳದ ಹಾಡುಗಳನ್ನು ಹೇಳುವ ಮೂಲಕ ಮಲಗಿಸಲಾಗುತ್ತಿತ್ತು. ಚಂದ್ರನನ್ನು ತೋರಿಸಿ ಊಟ ಮಾಡಿಸಲಾಗುತ್ತಿತ್ತು. ಕಥೆಗಳನ್ನು ಹೇಳುವ ಮೂಲಕ ಮಕ್ಕಳನ್ನು ಸಮಧಾನಮಾಡಲಾಗುತ್ತಿತ್ತು. ಮಕ್ಕಳೊಂದಿಗೆ ಆಡಿ ನಲಿದು, ಕುಣಿತು ಕುಪ್ಪಳಿಸಿ ಮಕ್ಕಳಿಗೆ ಸ್ಪೂರ್ತಿಯಾಗಿದ್ದ ಕುಂಟುAಬಳು ಇತ್ತೀಚಿನ ದಿನಗಳಲ್ಲಿ ಎಲ್ಲಾವೂ ಮೋಬೈಲೊಳಗೆ ಸೇರಿ ಹೋಗಿದೆ.


ಮೊಬೈಲ್ ಇಲ್ಲದೆ ಮಕ್ಕಳು ಏನನ್ನು ಮಾಡಲು ಆಗುತ್ತಿಲ್ಲ. ಮಲಗಲು.ಉಣ್ಣಲು, ಉಡಲು, ಕುಣಿಯಲು ಎಲ್ಲಾದಕ್ಕೂ ಮೊಬೈಲ್ ಬೇಕೆ ಬೇಕು ಅಷ್ಟೆ ಅಲ್ಲ ಕಲಿಯಲು ಮೊಬೈಲ್ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಮೊಬೈಲ್ ಇಲ್ಲದ ಮಕ್ಕಳ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಚರ್ಚೆ ಎಲ್ಲೆಲ್ಲೂ ಸಹಜವಾಗಿದೆ.


ಮೊಬೈಲ್ ನ್ನು ಮಕ್ಕಳಿಗೆ ಕೊಟ್ಟವರು ನಾವೆ, ಕೊಟ್ಟಮೇಲೆ ಹೇಳುವುದೇನಿದೆ. ಅದಿರಿಂದ ಪೋಷಕರು ನಿರಾಳ ಆಗಿರಬಹುದು. ಮೊಬೈಲ್ ಜಗತ್ತಿನಲ್ಲಿ ಮುಳುಗಿದ ಮಕ್ಕಳು ಪೋಷಕರನ್ನು ತಿರಸ್ಕರಿಸುತ್ತಿರವುದು ಸಹಜವಾದ ಸಂಗತಿಯಾಗಿದೆ. ಈಗ ಎಲ್ಲೆಲ್ಲೊ ಮೊಬೈಲ್‌ನಿಂದ ಮಕ್ಕಳನ್ನು ದೂರ ಮಾಡಬೇಕು ಎನ್ನುವ ಕೂಗು ಮತ್ತು ಕೊರಗು ಎಲ್ಲಾ ಪೋಷಕರನ್ನೂ ಕಾಡುತ್ತಿದೆ.
ಮೊಬೈಲ್ ಗೀಳಿಗೆ ಬಲಿಯಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದು ಸಹಜವಾಗುತ್ತಿದೆ. ಬೆರೆಲ್ಲಾ ಕೆಲಸಗಳಿಗಿಂತ ಮೊಬೈಲ್ ಬಳಕೆಯಲ್ಲಿ ತೊಡಗಿಸಿಕೊಂಡಿರುವುದು ಸಾಮಾನ್ಯದ ವಿಷಯವಾಗುತ್ತಿದೆ. ಮುಂದೇನು ಮುಂದೇನು ಎನ್ನುವ ಆತಂಕ ಎಲ್ಲಾ ಪೋಷಕರಲ್ಲು ಇದೆ.


ಈ ಕೂಗು ದೇವರ ಹತ್ತಿರಕ್ಕೂ ಹೋಗಿದೆ ದೇವರ ಏನಾದರೂ ಮಾಡಿ ನಮ್ಮ ಮಕ್ಕಳನ್ನು ಮೊಬೈನಿಂದ ದೂರಮಾಡಿ ಎನ್ನುವ ಪ್ರಾರ್ಥನೆ ಎಲ್ಲಾ ದೇವಾಲಯಗಳಲ್ಲು ನಡೆಯುತ್ತಿದೆ. ನಿಜವಾಗಿಯೂ ಆತಂಕವಾಗುತ್ತಿದೆ. ಮಕ್ಕಳು ಓದುವುದನ್ನೆ ಮರೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಒತ್ತಡದಲ್ಲಿ ಸಿಲುಕಿದ್ದಾರೆ.


ಶಾಲಾ ಶಿಕ್ಷಣ ಕಲಿಕೆ ಅದರಲ್ಲೂ ಹೋಂ ವರ್ಕ್ ಮಾಡಿಸುವಾಗ ಮೊಬೈಲ್ ಬಳಸುತ್ತಿರುವ ಮಕ್ಕಳನ್ನು ನೋಡಿ ಇದೇನಿದೆ ಎಂದರೂ ಅದು ಶಿಕ್ಷಕರು ಮೊಬೈಲ್‌ಗೆ ಹಾಕಿ ಈ ರೀತಿಯಲ್ಲಿ ಹೋಂ ವರ್ಕ್ ಮಾಡಿಕೊಂಡು ಬನ್ನಿ ಎನ್ನುವ ಕೆಲಸ ನಿತ್ಯ ನಡೆಯುತ್ತಿದೆ. ಈ ಎಲ್ಲಾ ವಿಚಾರಗಳಿಂದ ಮಕ್ಕಳು ಮೊಬೈಲ್ ಬಳಕೆ ಸಹಜವಾಗಿ ನಡೆಯುತ್ತಿದ್ದು ಅದರಳ ಬಳಕೆ ಹೆಚ್ಚಿದ್ದು ಅದರೊಂದಿಗೆ ವ್ಯಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್, ಇನ್ನಿತರೆ ಆಧುನಿಕತೆ ಮಕ್ಕಳಿಗೆ ಮುಳುವಾಗಿ ಪರಿಣಮಿಸಿದೆ ಇದರಿಂದ ಹೊರ ತರುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದ್ದು ಕರ್ನಾಟಕ ಸರ್ಕಾರ ದೇಶದಲ್ಲಿಯೇ ಮೊದಲ ರಾಜ್ಯವಾಗಿದೆ.


ಅದಕ್ಕಿಂತ ಮುಖ್ಯವಾಗಿ ಮೊಬೈಲ್‌ನಿಂದ ದೂರ ಇರುವಂತೆ ಮಕ್ಕಳಿಗೆ ಹೇಳುವುದು ಅಷ್ಟೊಂದು ಸುಲಭದ ಸಂಗತಿಯಲ್ಲ. ಅಂತಹ ದೈರ್ಯ ಇರಬೇಕು. ಹಾಗೂ ಅದರ ಸಾಧಕ ಬಾದಕಗಳನ್ನು ಸಹ ಗಮಿಸಬೇಕಾಗಿರುತ್ತದೆ. ಸಮೂಹವನ್ನು ವಿರೋಧಿಸಲು ಯಾರೂ ಸಹ ಮುಂದಾಗುವುದಿಲ್ಲ. ನಮಗೇಕೆ ಬೇಕು ಅದರ ಉಸಬಾರಿ ಎನ್ನುವವರೇ ಹೆಚ್ಚು ಅಷ್ಟೆ ಅಲ್ಲದೆ ನಮ್ಮ ವಿರುದ್ದ ಪೋಷಕರು ಎಲ್ಲಿ ತಿರುಗಿ ಬೀಳುತ್ತಾರೆ ಎನ್ನುವ ಆತಂಕವು ಸಹಜವಾಗಿಯೇ ಇರುತ್ತದೆ. ಆದರೆ ಕರ್ನಾಟಕ ಸರ್ಕಾರ ಅದನ್ನೆಲ್ಲ ದಾಟಿ ಹದಿನಾರು ವರ್ಷ ವಯೋಮಿತಿಯೊಳಗಿನ ಮಕ್ಕಳು ಮೊಬೈಲ್‌ನ್ನು ಅದರಲ್ಲೂ ಸಾಮಾಜಿಕ ಜಾಲಾತಾಣಗಳನ್ನು ಬಳಸದಂತೆ ವಿಷಯ ಮಂಡಿಸಲಾಗಿರುವುದು ಇದೊಂದು ಐತಿಹಾಸ ನಿರ್ಣಯವಾಗಿದೆ.


ಪೋಷಕರು ಒಂದು ರೀತಿಯಲ್ಲಿ ನಿಟ್ಟಿಸಿರು ಬಿಟ್ಟಿದ್ದಾರೆ. ಆದರೆ ಅದಕ್ಕೆ ಪೂರಕವಾಗಿ ಪೂರ್ಣವಾದ ಮಾರ್ಗದರ್ಶಿ ಬರಬೇಕಿದೆ. ಸರ್ಕಾರದ ದಿಟ್ಟ ನಿರ್ಧಾರವನ್ನು ಎಲ್ಲಾ ಪೋಷಕರು ಸ್ವಾಗತಿಸಿದ್ದಾರೆ ಎನ್ನುವುದು ಸಂತಸದ ಸಂಗತಿಯಾಗಿದೆ,
ಆದರೆ ಇಷ್ಟೆ ಆದರೆ ಸಾಲದು ಪೋಷಕರ, ಶಿಕ್ಷಕರ ಜವಬ್ದಾರಿ ಸಾಕಷ್ಟಿದೆ. ಸಾಮಾಜಿಕ ಹೊಣೆಗಾರಿಕೆ ಇದೆ. ಯಾವುದನ್ನು ಹೇಗೆ ಬಳಸಬೇಕು ಏಕೆ ಬಳಸಬೇಕು ಯಾವಾಗ ಬಳಸಬೇಕು ಎನ್ನುವ ವಿವೇಚನೆ ಇರಬೇಕಾಗುತ್ತದೆ.


ಇನ್ನಾದರೂ ಎಚ್ಚೆತ್ತುಕೊಂಡು ಮೊಬೈಲ್ ಬಳಸುವ ಬಗ್ಗೆ ವ್ಯಾಪಕವಾಗಿ ಮಾರ್ಗದರ್ಶನವನ್ನು ನೀಡುವ ಕೆಲಸ ಆಗಬೇಕಾಗಿದೆ. ಶಾಲಾ ಹಂತದಿAದಲೂ ಒಂದಿಷ್ಟು ಮಾರ್ಗದರ್ಶನ ಆಗಬೇಕಿದೆ. ಹಾಗಾದಲ್ಲಿ ಮಾತ್ರ ಮಕ್ಕಳನ್ನು ಮೊಬೈಲ್‌ನಿಂದ ದೂರವಾಗಿಸಲು ಸಾಧ್ಯವಾಗುತ್ತದೆ,ಏನೆ ಆಗಲಿ ದೇಶದಲ್ಲಿಯೇ ಕರ್ನಾಟಕ ಮಕ್ಕಳು ಮೊಬೈಲ್ ಬಳಸುವುದನ್ನು ನಿಷೇಧ ಮಾಡಿದ ಕ್ರಮ ನಿಜವಾಗಿಯೂ ಶ್ಲಾಘನಿಯವಾದ ಸಂಗತಿಯಾಗಿದೆ,

                                ವಿ.ಟಿ.ಸ್ವಾಮಿ,ಕವಿತೋಟ