ಮನೆ Blog ಮುಳುಗಡೆ ಸಂತ್ರಸ್ತರ ಅರ್ಜಿಗಳು ವಜಾ ಆಗಲು ಕುತಂತ್ರಿಗಳೇ ಕಾರಣ: ಗೋಪಾಲಕೃಷ್ಣ ಬೇಳೂರು..!!

ಮುಳುಗಡೆ ಸಂತ್ರಸ್ತರ ಅರ್ಜಿಗಳು ವಜಾ ಆಗಲು ಕುತಂತ್ರಿಗಳೇ ಕಾರಣ: ಗೋಪಾಲಕೃಷ್ಣ ಬೇಳೂರು..!!

25
0

✒️ಅಮಿತ್ ಆರ್ ಆನಂದಪುರ

ಆನಂದಪುರ:ಎಲೆಕ್ಷನ್ ಹತ್ತಿರ ಬಂದ ಕೂಡಲೇ ಮುಳುಗಡೆ ಸಂತ್ರಸ್ತರು ಎಂದು ಓಡಿ ಬರುತ್ತಾರೆ. ಮುಳುಗಡೆ ಸಂತ್ರಸ್ತರಿಗೆ ವಿಷ ಕೊಟ್ಟವರು ಇವರೇ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಇವರು ಶುಕ್ರವಾರ ಸಮೀಪದ ಕಣ್ಣೂರಿನ ಮಾರಿಕಾಂಬ ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಪತ್ರಕರ್ತರೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರ ನಿಮ್ಮದೇ ಇದೆ. ನಿಮಗೆ ತಾಕತ್ತು, ದಮ್ಮು ಇದ್ದರೆ ಅರಣ್ಯ ಕಾಯ್ದೆಯನ್ನು 75 ವರ್ಷದಿಂದ 25 ರಿಂದ 30 ವರ್ಷಕ್ಕೆ ಕಡಿಮೆ ಮಾಡಿ ತಂದುಕೊಡಿ. ಇದನ್ನು ಮಾಡಲು ನಿಮಗೆ ಯೋಗ್ಯತೆ ಇದೆಯಾ ಎಂದು ಸವಾಲು ಹಾಕಿದರು.

ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಗಮನಹರಿಸುವುದು ನನ್ನ ಅಥವಾ ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಇದು ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ನಿಮ್ಮದೇ ಸರ್ಕಾರ ಇದೆ; ಮಾತನಾಡಿ ಇದನ್ನು ಬಗೆಹರಿಸಿದರೆ, ಖುದ್ದಾಗಿ ಹೋಗಿ ನಾನೇ ಅವರಿಗೆ ಸನ್ಮಾನ ಮಾಡುತ್ತೇನೆ. ಬಗೆಹರಿಸುವ ಯೋಗ್ಯತೆ ನಿಮಗಿದೆಯಾ ಎಂದು ಪ್ರಶ್ನಿಸಿದರು.

ಯಾರು ನನ್ನ ಮೇಲೆ ಅಪವಾದ ಮಾಡುತ್ತಾರೋ, ಆ ಕುತಂತ್ರಿಗಳು ಹಾಗೂ ಪಾಪಿಗಳಿಂದ ಶರಾವತಿ ಮುಳುಗಡೆ ಸಂತ್ರಸ್ತರ 9 ಸಾವಿರ ಅರ್ಜಿಗಳು ವಜಾಗೊಂಡಿವೆ ಎಂದು ಹೇಳಿದರು.

ಸಚಿವರಾದ ಮಧು ಬಂಗಾರಪ್ಪ, ನಾನು ಮತ್ತು ನಮ್ಮ ಸರ್ಕಾರದವರು ಸೇರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿ ಸರ್ವೇ ಮಾಡಿಸಿದ್ದೇವೆ. ಈ ಸರ್ವೆಯಿಂದ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಯಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಹಾಗೂ ಮುಖಂಡರು ಮತ್ತು ಜಾತ್ರಾ ಸಮಿತಿಯವರು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t