ಮನೆ Blog ರಿಪ್ಪನ್ ಪೇಟೆ, ಎಡೇಹಳ್ಳಿ ಸರ್ಕಲ್‌ಗಳಿಗೆ ಹೈಟೆಕ್ ಸ್ಪರ್ಶ:ಶಾಸಕ ಗೋಪಾಲಕೃಷ್ಣ ಬೇಳೂರು

ರಿಪ್ಪನ್ ಪೇಟೆ, ಎಡೇಹಳ್ಳಿ ಸರ್ಕಲ್‌ಗಳಿಗೆ ಹೈಟೆಕ್ ಸ್ಪರ್ಶ:ಶಾಸಕ ಗೋಪಾಲಕೃಷ್ಣ ಬೇಳೂರು

11
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.47851834, 0.42545816);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;

✒️ಅಮಿತ್ ಆರ್ ಆನಂದಪುರ

ಆನಂದಪುರ: ರಿಪ್ಪನ್ ಪೇಟೆ ಸರ್ಕಲ್ ಅನ್ನು ಹೈಟೆಕ್ ಸರ್ಕಲ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಅದೇ ರೀತಿ ಎಡೇಹಳ್ಳಿ ಸರ್ಕಲ್‌ನನ್ನೂ ಹೈಟೆಕ್ ಆಗಿ ರೂಪಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಶುಕ್ರವಾರ ಸಮೀಪದ ಎಡೇಹಳ್ಳಿ ಸರ್ಕಲ್ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಆನಂದಪುರದ ಎಡೇಹಳ್ಳಿ ಮತ್ತು ರಿಪ್ಪನ್ ಪೇಟೆ ಸಂಪರ್ಕ ರಸ್ತೆ ರಿಪ್ಪನ್ ಪೇಟೆ ಸರ್ಕಲ್ ವರೆಗೆ ಸೇರಿ ಒಟ್ಟು ₹27.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು.

ವಾಹನ ಸವಾರರಿಗೆ ಅನುಕೂಲವಾಗುವಂತೆ ಸುಸಜ್ಜಿತ ಹಾಗೂ ಆಧುನಿಕ ಸರ್ಕಲ್ ನಿರ್ಮಾಣ ಮಾಡುವುದರ ಜೊತೆಗೆ ಹೈಮಾಸ್ಕ್ ಲೈಟಿಂಗ್ ವ್ಯವಸ್ಥೆ ಅಳವಡಿಸಲಾಗುವುದು. ಅಲ್ಲದೆ, ಉತ್ತಮ ಸೌಲಭ್ಯಗಳೊಂದಿಗೆ ಬಸ್ ನಿಲ್ದಾಣವನ್ನು ನಿರ್ಮಿಸಿ ಎಡೇಹಳ್ಳಿ ಸರ್ಕಲ್ ಹೈಟೆಕ್ ಸರ್ಕಲ್ ಆಗಿ ರೂಪಿಸಲಾಗುತ್ತದೆ ಎಂದರು.

ಗಾಣಿಗರ ಕೆರೆಗೆ ವಾಕಿಂಗ್ ಪಾಥ್ ನಿರ್ಮಾಣಕ್ಕೆ ₹1 ಕೋಟಿ ಈಗಾಗಲೇ ಮಂಜೂರಾಗಿದೆ. ನೀರಿನ ಮಟ್ಟ ಸ್ವಲ್ಪ ಇಳಿದ ನಂತರ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು.ತಾಲೂಕಿನ ಪ್ರತಿ ಹೋಬಳಿ ಮಟ್ಟದಲ್ಲಿ ಫುಡ್ ಕೋರ್ಟ್ ಮತ್ತು ನಂದಿನಿ ಪಾರ್ಲರ್‌ಗಳ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗುತ್ತಿದೆ ಎಂದರು.

ಸಾಗರ ತಾಯಿ ಮಕ್ಕಳ ಆಸ್ಪತ್ರೆಯನ್ನು ಹೈಟೆಕ್ ಆಗಿ ಅಭಿವೃದ್ಧಿಪಡಿಸಿದ್ದು, ಅದರ ಎದುರು ಸುಸಜ್ಜಿತ ಪಾರ್ಕ್ ನಿರ್ಮಿಸಲಾಗಿದೆ. ಸಾಗರ ನಗರ ಆಸ್ಪತ್ರೆಯನ್ನೂ ಹೈಟೆಕ್ ಮಾಡಲಾಗಿದೆ. ಜೊತೆಗೆ ಆನಂದಪುರ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ₹60 ಲಕ್ಷ ಮಂಜೂರು ಮಾಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ವಿರೋಧ ಪಕ್ಷದ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು,ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t