Home Blog ಸಾಗರ : ಆರ್.ಬಿ.ಡಿ. ಗ್ರೂಪ್‍ನ ಮಹೇಶ್ ಅವರಿಗೆ ನಾರಾಯಣ ರತ್ನ ಪ್ರಶಸ್ತಿ..!!

ಸಾಗರ : ಆರ್.ಬಿ.ಡಿ. ಗ್ರೂಪ್‍ನ ಮಹೇಶ್ ಅವರಿಗೆ ನಾರಾಯಣ ರತ್ನ ಪ್ರಶಸ್ತಿ..!!

74
0

✒️..ಅಮಿತ್ ಆರ್ ಆನಂದಪುರ

ಸಾಗರ : ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ, ದಾನಿ ಆರ್.ಬಿ.ಡಿ. ಗ್ರೂಪ್‍ನ ಮಹೇಶ್ ಡಿ. ಅವರಿಗೆ ನಾರಾಯಣ ರತ್ನ ಪ್ರಶಸ್ತಿ ನೀಡಲಾಗಿದೆ.


ಉದ್ಯಮದಲ್ಲಿ ಹೊಸಹೊಸ ಆವಿಷ್ಕಾರ ಕೈಗೊಂಡಿದ್ದು, ದುಡಿಯುವ ಕೈಗಳಿಗೆ ಕೆಲಸ, ಉದ್ಯೋಗ ಸೃಷ್ಟಿ, ಸಾಮಾಜಿಕ ಸೇವೆ, ವಿವಿಧ ಕಾರ್ಯಕ್ರಮಗಳ ಯಶಸ್ಸಿಗೆ ದೇಣಿಗೆ ಸೇರಿ ಮಹೇಶ್ ಡಿ. ಅವರು ನಿರಂತರವಾಗಿ ಸಕ್ರಿಯ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದನ್ನು ಗುರುತಿಸಿ ನಿಟ್ಟೂರು ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನ ಪೀಠವು ಗರ್ತಿಕೆರೆಯಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾವಳಿಯಲ್ಲಿ ಪ್ರತಿಷ್ಟಿತ ನಾರಾಯಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಮಹೇಶ್ ಡಿ. ಅವರು ಆರ್.ಬಿ.ಡಿ. ಗ್ರೂಪ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದು ಸಾಗರ, ಹೊಸನಗರ ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳಲ್ಲಿ ತಮ್ಮ ಉದ್ಯಮ ವಿಸ್ತರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ನೂರಾರು ಯುವಜನರಿಗೆ ತಮ್ಮ ಬೇರೆಬೇರೆ ಸಂಸ್ಥೆಗಳಲ್ಲಿ ಉದ್ಯೋಗ ನೀಡುವ ಜೊತೆಗೆ ಸಹಕಾರಿ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಆರ್ಥಿಕ ಕ್ಷೇತ್ರಕ್ಕೂ ಆರ್.ಬಿ.ಡಿ. ಪಾದಾರ್ಪಣೆ ಮಾಡುವಲ್ಲಿ ಶ್ರಮಿಸಿದ್ದಾರೆ.

ಮುಖ್ಯವಾಗಿ ಅನೇಕ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಪರೋಕ್ಷ ಸಹಕಾರ ನೀಡುತ್ತಿದ್ದಾರೆ. ಮಹೇಶ್ ಡಿ. ಅವರ ಬಹುಮುಖ ಸಾಧನೆ ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿದೆ ಎಂದು ತಿಳಿಸಲಾಗಿದೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t