ಮನೆ Blog ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಕ್ಷರ ದಾಸೋಹ ಪೂರಕ..ಬಿಇಓ ಸದಾನಂದ ಸ್ವಾಮಿ..!!

ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಕ್ಷರ ದಾಸೋಹ ಪೂರಕ..ಬಿಇಓ ಸದಾನಂದ ಸ್ವಾಮಿ..!!

30
0


ಆನಂದಪುರ:ಮಾ-24/ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಕ್ಷರ ದಾಸೋಹ ಪೂರಕವಾಗಿದೆ ಎಂದು ಬಿಇಓ ಸದಾನಂದ ಸ್ವಾಮಿ ಸಿ ಹೇಳಿದರು.


ಅವರು ಇಲ್ಲಿನ ಕೆಪಿಎಸ್ ಶಾಲಾ ಸಭಾಂಗಣದಲ್ಲಿ ಅಕ್ಷರ ದಾಸೋಹ ಅಡಿಗೆ ಸಿಬ್ಬಂದಿಯವರಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಅಡಿಗೆ ಮಾಡುವ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಬರಬಹುದು ಅದಕ್ಕೆ ಪೂರ್ವದಲ್ಲಿ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಅಡಿಗೆ ಸಿದ್ಧಪಡಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಅಡಿಗೆ ಮಾಡುವದು ಒಂದು ಕಲೆಯಾಗಿದೆ. ಶುದ್ದತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಬೇಕು. ಇಲ್ಲಿ ಶ್ರಮ ಮುಖ್ಯವಾಗಿದೆ.

ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಕೆಲಸ ಆಗಬೇಕಾಗಿದೆ. ಭಾರತದಲ್ಲಿ ಆಹಾರ ಒಂದು ಸಂಸ್ಕೃತಿಯನ್ನು ಸಾರುತ್ತದೆ, ನಿರಂತರವಾಗಿ ತರಬೇತಿಯನ್ನು ಪಡೆಯುವ ಮೂಲಕ ನಮ್ಮ ಕಾರ್ಯವನ್ನು ಉತ್ತಮಗೊಳಿಸಿ ಕೊಳ್ಳಬೇಕು, ಅಡಿಗೆ ಮನೆಗಳನ್ನು ಆಕರ್ಷಕವಾಗಿ ಇಡಬೇಕು ಎಂದರು.


ಅಕ್ಷರ ದಾಸೋಹ ಜಿಲ್ಲಾ ನಿರ್ದೇಶಕ ಪರಶುರಾಪ್ಪ ಈ, ಮಾತನಾಡಿ ಅಡಿಗೆಯವರು ಕಾಳಜಿಯಿಂದ ಕೆಲಸ ಮಾಡಬೇಕು. ತರಬೇತಿಯ ಮೂಲಕ ಅನೇಕ ವಿಷಯಗಳನ್ನು ಕಲಿಯಲು ಸಾಧ್ಯ ಎಂದರು.


ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಸಾಗರ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಭೂಮೇಶ್, ಟಿಪಿಇಓ ರಮೇಶ್, ಅಕ್ಷರ ದಾಸೋಹ ಸಂಘಟನೆಯ ಪ್ರಮುಖರಾದ ಪರಮೇಶ್ವರ ಹೊಸಕೊಪ್ಪ, ಶಿಕ್ಷಣ ಸಂಯೋಜಕರಾದ ಡಾ.ಶಂಕರ್ ಶಾಸ್ತ್ರೀ, ಪಾಲಾಕ್ಷಪ್ಪ, ಕುಮಾರಸ್ವಾಮಿ, ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t