ಬೆಂಗಳೂರು:ಏ-4/ ಪುಸ್ತಕಗಳು ಮನುಷ್ಯನ ಬದುಕನ್ನೆ ಬದಲಿಸಬಲ್ಲವು ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಶಿವಚಿತ್ತಪ್ಪ ಹೇಳಿದರು.
ಅವರು ಯಲಹಂಕ ಸಮೀಪದ ಬಾಗಲೂರು ವಿಜಯ ಜ್ಯೋತಿ ಇಂಟರ್ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸ್ನೇಹಿತರ ಬಳಗ ಆಯೋಜಿಸಿದ್ದ ವಿ.ಟಿ.ಸ್ವಾಮಿ ಸಾಗರ ಇವರು ರಚಿಸಿದ ಶಿಕ್ಷಣ ಸಾಹಿತ್ಯ ಸಾಂಸ್ಕೃತಿಕ ರಂಗಭೂಮಿ ಸಮಾಜ ಸೇವಕ ಹಾಗೂ ಕನ್ನಡ ಪರ ಹೋರಾಟಗಾರ ಡಾ.ಶ್ರೀರಾಮಚಂದ್ರ ಅವರ ಜೀವನದ ಹೆಜ್ಜೆ ಗುರುತುಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೊಳಗೆ ಸಾಧಕನಿರುತ್ತಾನೆ ಎನ್ನುವುದಕ್ಕೆ ಶ್ರೀರಾಮಚಂದ್ರ ಅವರೇ ಸಾಕ್ಷಿ, ಇಂತಹ ವ್ಯಕ್ತಿಗಳ ಬದುಕಿನ ವಿಚಾರಧಾರೆಗಳನ್ನು ಸಾಹಿತ್ಯ ರೂಪದಲ್ಲಿ ದಾಖಲಿಸುವ ಕೆಲಸ ಅಭಿನಂದನಿಯ, ಮಾತುಗಿಂತ ಮೌನ ಹೆಚ್ಚು ಕೆಲಸ ಮಾಡಿಸುತ್ತದೆ ಎಂದರು.
ತಾನು ಬದುಕುವುದು ಮಾತ್ರವಲ್ಲ ಇತರರನ್ನು ಬದುಕಿಸುವ ಕೆಲಸ ಆಗಬೇಕಾಗಿದೆ ಹಾಗೂ ಮನಸಕ ಮನಸುಗಳನ್ನು ಬೆಳೆಯಬೇಕಾಗಿದೆ ಅಂತಹ ಕೆಲಸವನ್ನು ಶ್ರೀರಾಮಚಂದ್ರ ಮಾಡಿದ್ದಾರೆ ಇಂತಹ ಮೇರು ವ್ಯಕ್ತಿಯ ಬಗ್ಗೆ ಪುಸ್ತಕ ಬರೆಯಲು ಮುಂದಾದ ವಿ.ಟಿ.ಸ್ವಾಮಿಯವರಿಗೆ ವಿಶೇಷ ಅಭಿನಂದನೆಗಳು ಎಂದರು.
ಬೆಂಗಳೂರಿನ ಯು.ಎ.ಇ ವಿಸ್ತರಣಾಧಿಕಾರಿ ಡಾ.ಕೆ.ನಾರಾಯಣ ಗೌಡ ಮಾತನಾಡಿ ಪ್ರತಿಯೊಬ್ಬರು ಸ್ವಾರ್ಥ ಬದುಕಿನಾಚೆ ಬೆಳೆಯಬೇಕು ಸಾಮಾಜಿಕ ಕಳಕಳಿಯಿಂದ ಜೀವನ ರೂಪಿಸಿಕೊಳ್ಳಬೇಕು, ಕೆಲಸಗಳೇ ಮಾತುಗಳು ಆಗಬೇಕಾಗಿದೆ. ಅಂತಹ ದಾರಿಯಲ್ಲಿ ಸಾಗಿ ಬಂದಿರುವ ಶ್ರೀರಾಮಚಂದ್ರ ಅವರ ಬದುಕು ಸಾರ್ಥಕವಾಗಿದೆ. ಅಂತಹವರ ಬದುಕಿನ ಹೆಜ್ಜೆ ಗುರುತುಗಳನ್ನು ದಾಖಲಿಸುವ ಕೆಲಸ ಆಗಿರುವುದು ಶ್ಲಾಘನೀಯ ಎಂದರು.

ಲೇಖಕ ವಿ.ಟಿ.ಸ್ವಾಮಿ ಮಾತನಾಡಿ ಮನುಷ್ಯ ಎಷ್ಟು ದಿನ ಬದುಕಿರುವೆ ಎನ್ನುವುದಕ್ಕಿಂತ ಹೇಗೆ ಬದುಕಿದೆ ಎನ್ನುವುದು ಮುಖ್ಯ,ಸಮಾಜಮುಖಿ ಬದುಕಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು ಎಂದರು.
ಡಾ.ಚಿಕ್ಕಹನುಮಂತೇಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ವೇದಿಕೆಯಲ್ಲಿ ಬಾಗಲೂರು ಗ್ರಾಪಂ ಅಧ್ಯಕ್ಷ ಕೆಂಪೇಗೌಡ ಮಧುಕುಮಾರ್, ಮೊದಲಾದವರು ಉಪಸ್ಥಿತರಿದ್ದರು,ಈ ಸಂದರ್ಭದಲ್ಲಿ ಲೇಖಕ ವಿ.ಟಿ.ಸ್ವಾಮಿ ಸಾಗರ, ಡಾ.ಶ್ರೀರಾಮಚಂದ್ರ ಹಾಗೂ ವೇದಿಕೆ ಗಣ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಹಿರಿಯ ಕಲಾವಿದರಿಂದ ಕುರುಕ್ಷೇತ್ರ ಪೌರಾಣಿಕ ನಾಟಕಗಳನ್ನು ಪ್ರದರ್ಶನವನ್ನು ಮಾಡಲಾಯಿತು

ಹಿರಿಯ ಕಲಾವಿದರ ಸಮಾಗಮದಲ್ಲಿ ಪೌರಾಣಿಕ ಕುರುಕ್ಷೇತ್ರ ನಾಟಕ ವಿಶೇಷ ಗಮನ ಸೆಳೆಯಿತು. ರಾತ್ರಿ 10 ಗಂಟೆಗೆ ಆರಂಭಿಸಿ ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಯಿತು. ಅತ್ಯಂತ ಹಿರಿಯ ಕಲಾವಿದ ದುರ್ಯೋಧನನ ಪಾತ್ರ ಮಾಡಿ ಪ್ರೇಕ್ಷಕರ ಗಮನ ಸೆಳೆದ ಸಿ.ರಾಜಣ್ಣ ಮಹಾದೇವ ಕೊಡಿಗೆಹಳ್ಳಿ ಅವರಿಗೆ ಸುಮಾರು ಒಂದುವರೆ ಕೆಜಿ ತೂಕದ ಬೆಳ್ಳಿ ಗದೆಯನ್ನು ನೀಡಿ ಗೌರವಿಸಲಾಯಿತು
ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿ ನಾಟಕವನ್ನು ವೀಕ್ಷಿಸಿದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









