ಶಿವಮೊಗ್ಗ, ಏ,17: ಕೋಮು ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಶಿವಮೊಗ್ಗದ ಕಾರ್ಯಕ್ರಮಕ್ಕೆ ಬರುವುದನ್ನು ನಿರ್ಬಂಧ ಹೇರಬೇಕು ಎಂದು ಶಿವಮೊಗ್ಗದ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಗೆ ಮನವಿ ಸಲ್ಲಿಸಲಾಗಿದೆ.
ಕೋಮು ದ್ವೇಷ ಭಾಷಣಕಾರರ ಚಕ್ರವರ್ತಿ ಸೂಲಿಬೆಲೆ ಏ.18 ರಂದು ನಗರದ ಕುವೆಂಪು ರಂಗಮಂದಿರದಲ್ಲಿ “ನಾನೇ ಭಾರತ್“ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಗೆ ನಿರ್ಬಂಧ ಹೇರಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಶಿವಮೊಗ್ಗದ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ರವರಿಗೆ ಮನವಿ ಸಲ್ಲಿಸಿದ್ದಾರೆ.
ಹಲವು ಜಿಲ್ಲೆಗಳಲ್ಲಿ ನಿರ್ಭಂಧಕ್ಕೆ ಒಳಗಾಗಿರುವ ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮೇಲೆ ಹಲವು ಕೋಮು ಪ್ರಚೋದನಕಾರಿ ಭಾಷಣದ ಪ್ರಕರಣಗಳಿದ್ದು, ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಚಕ್ರವರ್ತಿ ಸೂಲಿಬೆಲೆಗೆ ಭಾಷಣ ಮಾಡಲು ಬಿಡಬಾರದು ಎಂದು ಮನವಿ ನೀಡಲಾಗಿದೆ.

ಈ ಸಂದರ್ಭದಲ್ಲಿ SDPI ಪಕ್ಷದ ಜಿಲ್ಲಾಧ್ಯಕ್ಷ ಜೀಲಾನ್ ರಜಾ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಮ್ರಾನ್, ಜಮೀರ್, ಸಮಿತಿ ಸದಸ್ಯರಾದ ಕಲೀಂ, ಇಸಾಖ್, ಮತ್ತು ಶಿವಮೊಗ್ಗ ನಗರ ಕಾರ್ಯದರ್ಶಿ ಸಜೀಲ್, ನಗರ ಸಮಿತಿಯ ಹಬೀಬ್ ರವರು ಉಪಸ್ಥಿತರಿದ್ದರು.









