Home Shivamogga ಡ್ರೋನ್ ಮೂಲಕ ಆಕ್ರಮದಂಧೆಗೆ ಕಡಿವಾಣ ಹಾಕಿದ ಪೊಲೀಸರು..!!

ಡ್ರೋನ್ ಮೂಲಕ ಆಕ್ರಮದಂಧೆಗೆ ಕಡಿವಾಣ ಹಾಕಿದ ಪೊಲೀಸರು..!!

54
0

ಶಿವಮೊಗ್ಗ: ಅರಣ್ಯದ ಮಧ್ಯೆ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಆರೋಪಿಗಳನ್ನು ಡ್ರೋನ್ ಮೂಲಕ ಪತ್ತೆ ಹಚ್ಚಿ ಬಂದಿಸಿದ ಪೊಲೀಸರು.

ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ದಂಧೆಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್‌ ಇಲಾಖೆ ವಿನೂತನ ಕಾರ್ಯಾಚರಣೆ ನಡೆಸಿದೆ.

ಎಸ್ಪಿ ನಿಖಿಲ್ ಅವರ ಖಡಕ್ ಸೂಚನೆಯ ಮೇರೆಗೆ ಮೊದಲ ಬಾರಿಗೆ ಡೋನ್ ಕ್ಯಾಮೆರಾಗಳನ್ನು ಬಳಸಿ ದಂಧೆಕೋರರ ಹೆಡೆಮುರಿ ಕಟ್ಟಲಾಗಿದ್ದು, 19 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭದ್ರಾವತಿ ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕೂಗಿ ಕೇಳಿ ಬರುತ್ತಿದ್ದು ಅಲ್ಲಿ ಹೋಗಿ ಸುದ್ದಿ ಮಾಡಲು ಸಾಧ್ಯವಿರದ ಪರಿಸ್ಥಿತಿಯಲ್ಲಿ ಮಾಧ್ಯಮಗಳಿದ್ದರೆ, ಪೊಲೀಸರ ವಿರುದ್ಧವೇ ಇಂತಹ ದಂಧೆಗಳಿಗೆ ಪ್ರೋತ್ಸಾಹ ದೊರೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹಾಗಾಗಿ ದಾಳಿ ನಡೆಯಲ್ಲ ಎಂಬ ಅಸಮಾಧಾನ ಮತ್ತು ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದ್ದವು.

ರಾಗಿಗುಡ್ಡದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ದ ಕ್ರಮ ಜರುಗಿಸಲು ಡ್ರೋನ್ ಹಾರಿಸಲಾಗಿತ್ತು. ಈಗ ಭದ್ರಾವತಿಯ ಕೂಡ್ಲಿಗೆರೆಯಲ್ಲಿ ಡೋನ್ ಹಾರಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ 19 ಜನರ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ ವೇಳೆ ಮಲ್ಲಾಪುರ, ಕಲ್ಲಿಹಾಳ್ ಮತ್ತು ತಟ್ಟೆಹಳ್ಳಿ ಭಾಗಗಳಲ್ಲಿ ಹಗಲು-ರಾತ್ರಿ ನಡೆಯುವ ‘ತೂರಬಿಲ್ಲೆ’ ಜೂಜಾಟದ ಬಗ್ಗೆಯೂ ವ್ಯಾಪಕ ದೂರುಗಳು ಕೇಳಿಬಂದಿವೆ. ಈ ಭಾಗಗಳಲ್ಲಿ ಪೊಲೀಸರು ಯಾವಾಗ ಡೋನ್ ಹಾರಿಸಿ ಅಕ್ರಮಗಳಿಗೆ ಅಂತ್ಯ ಹಾಡುತ್ತಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.