ಸಾಗರ:ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾವ ವನ್ನು ಯುವಕರು ಬೆಳೆಸಿಕೊಳ್ಳಬೇಕು ಆ ಮೂಲಕ ಭ್ರಷ್ಟಾಚಾರವನ್ನು ಹೊಡೆದೋಡಿಸುವತ್ತ ಸಾಗಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ತುಮರಿಯಲ್ಲಿ ಭಾನುವಾರ ಸಮಾನ ಮನಸ್ಕ ವೇದಿಕೆ ಆಯೋಜಿಸಿದ್ದ ಸಾಮಾಜಿಕ ಕಾರ್ಯಕರ್ತ ಓಂಕಾರ ತಾಳಗುಪ್ಪ ಅವರಿಗೆ ನುಡಿ ನಮನ ಸಲ್ಲಿಸಿ ಅವರು ಮಾತನಾಡಿದರು.
ನಾಗರೀಕ ಸಮಾಜಕ್ಕೆ ಕೊಡುಗೆ ನೀಡಿದವರನ್ನು ಇಂದಿನ ಸಮಾಜ ಮರೆಯುತ್ತಿದೆ, ಸಮಾಜದಲ್ಲಿ ಪತ್ರಿಕೋದ್ಯಮದ ಹಾದಿಯ ಬದಲಾಗಿದೆ. ಇದರಿಂದ ಸಮಾಜದಲ್ಲಿ ಭ್ರಷ್ಟತೆ, ದುಷ್ಟ ಶಕ್ತಿಗಳು, ಅಧಿಕಾರಶಾಹಿ ವ್ಯವಸ್ಥೆ ಹೆಚ್ಚುತ್ತಿದೆ. ಅನ್ಯಾಯದ ವಿರುದ್ಧ ರೊಚ್ಚಿಗೇಳುವ ಪ್ರವೃತ್ತಿಯನ್ನು, ಹೋರಾಟದ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.

ಎಲ್ಲಿ ಬಡವರಿಗೆ ಅನ್ಯಾಯವಾಗುತ್ತ ದೆಯೋ ಅಲ್ಲಿ ಅವರ ಪರವಾಗಿ ನಿಂತು ಧ್ವನಿ ಎತ್ತುವ ಮನೋಭಾವ ಬೆಳೆಸಿಕೊಳ್ಳಬೇಕು,ಓಂಕಾರ್ ತಾಳಗುಪ್ಪ ಸಹ ಹಲವಾರು ಸಮಸ್ಯೆಗಳಿಗೆ ಸಿಲುಕಿದರೂ ಎದೆಗುಂದದೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದರು. ಆನೇಕ ಬೆದರಿಕೆಗಳು ಬಂದರೂ ಸಹ ಬಡವರ ಪರ ದನಿ ಎತ್ತುವ ಕಾರ್ಯ ದಿಂದ ದೂರ ಸರಿಯಿಲ್ಲ ಎಂದು ಹಿರಿಯ ಪತ್ರಕರ್ತ ಟಿ ಎಂ ಶೇಷಗಿರಿ ಅವರ ವ್ಯಕ್ತಿತ್ವವನ್ನು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಗಣಪತಿ ಭಟ್, ಮಲ್ಲೇಶ್ ಕಿರುವಾಸೆ, ಪ್ರಕಾಶ್ ಅರಬಳ್ಳಿ, ಅರುಣ್ ಕರೂರು, ಸುಕುಮಾರ್ ಎಂ ಇದ್ದರು














