✒️…ಅಮಿತ್ ಆರ್ ಆನಂದಪುರ
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವ ಮೇ.6ರಂದು ಬೆಳಿಗ್ಗೆ 10-30ಕ್ಕೆ ಶಂಕರಘಟ್ಟದ ವಿವಿಯ ಜ್ಞಾನಸಹ್ಯಾದ್ರಿ ಆವರಣದಲ್ಲಿ ನಡೆಯಲಿದೆ,ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಅವರು ಆಗ್ರಾಸನ ವಹಿಸಲಿದ್ದು, ನ್ಯಾಕ್ ಮತ್ತು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಫೋರಮ್ ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುಧೆ ಘಟಿಕೋತ್ಸವ ಭಾಷಣ ಮಾಡುವರು. ವಿವಿಗಳ ಸಹಕುಲಾಧಿಪತಿಗಳೂ ಆದ ಉನ್ನತ ಶಿಕ್ಷಣ ಸಚಿವ ಸುಧಾಕರ್ ಉಪಸ್ಥಿತರಿರುವರು ಎಂದರು.

ಈ ಬಾರಿ ಘಟಿಕೋತ್ಸವದಲ್ಲಿ ವಿವಿಧ ವಿಭಾಗಳು ಸೇರಿ 106 ಪುರುಷರು ಹಾಗೂ 57 ಮಹಿಳೆಯರು ಸೇರಿದಂತೆ ಒಟ್ಟೂ 163 ಅಭ್ಯರ್ಥಿಗಳಿಗೆ ಪಿಎಚ್.ಡಿಪದವಿ ಪ್ರದಾನ ಮಾಡಲಾಗು ವುದು. ಎಂದರು.
ಪದವಿಗೆ ಅರ್ಹರಾಗಿದ್ದಾರೆ. ಅಲ್ಲದೆ 7,015 ಪುರುಷರು ಹಾಗೂ 9,940 ಮಹಿಳೆಯರು ಸೇರಿದಂತೆ ಒಟ್ಟೂ 16,955 ವಿದ್ಯಾರ್ಥಿಗಳು ಪದವಿ ಪಡೆಯಲುಅರ್ಹರಾಗಿ ದ್ದಾರೆ ಎಂದ ಅವರು 155 ಸ್ವರ್ಣಪದಕಗಳು ಇದು ಅವುಗಳನ್ನು 11 ಪುರುಷರು ಮತ್ತು 68 ಮಹಿಳೆಯರು ಸೇರಿ 79 ವಿದ್ಯಾ ರ್ಥಿಗಳು ಹಂಚಿಕೊಂಡಿ ರುತ್ತಾರೆ. 21 ನಗದು ಬಹುಮಾನಗಳಿದ್ದು ಅವು ಗಳನ್ನು 5 ಪುರುಷರು ಹಾಗೂ 24 ಮಹಿಳೆಯರು ಸೇರಿ ಒಟ್ಟೂ 29 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಜ್ಞಾನಸಹ್ಯಾದ್ರಿಯ ಅಭಿಶೇಕ್ ಎಚ್.ಎಂ. ಅವರು ಎಂ.ಎ. (ಕನ್ನಡ)ನಲ್ಲಿ ಅತೀ ಹೆಚ್ಚು 10 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದರೆ ರಕ್ಷಾ ಅವರು ಎಂಸ್ಸಿ (ಪರಿಸರ ವಿಜ್ಞಾನ)ಯಲ್ಲಿ 7 ಸ್ವರ್ಣಪದಕಗಳನ್ನು ಪಡೆದಿರುತ್ತಾರೆ. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸೃಷ್ಟಿ ಆರ್.ಅವರು ಎಂ.ಎಸ್ಸಿ (ಜೈವಿಕ ತಂತ್ರಜ್ಞಾನ ವಿಷಯದಲ್ಲಿ 6 ಸ್ವರ್ಣ ಪದಕಗಳನ್ನು ಪಡೆದಿದ್ದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಹನಾ ಗಣೇಶ್ ಶೇಟ್ ಅವರು ಎಂ.ಬಿ.ಎ. ನಲ್ಲಿ 5 ಸ್ವರ್ಣ ದಕ ಮತ್ತು ಒಂದು ನಗದು ಬಹುಮಾನ ಪಡೆದಿರುತ್ತಾರೆ.

ಅಲ್ಲದೆ ಸಜನಾ ಎಸ್. ಅವರು ಎಂ.ಎ. (ಸಮಾಜಶಾಸ್ತ್ರ)ದಲ್ಲಿ 5 ಸ್ವರ್ಣ ಪದಕಗಳನ್ನು ಪಡೆದಿದದಾರೆ. ಅಭಿಲಾಷ್ ಎಲ್. ಅವರು ಎಂಎಸ್ಸಿ (ಗಣಿತಶಾಸ್ತ್ರ)ಯಲ್ಲಿ 4 ಸ್ವರ್ಣ ಪದಕ ಹಾಗೂ 2 ನಗದು ಬಹು ಮಾನಗಳನ್ನು ಪಡೆದಿರುತ್ತಾರೆ. ಇನ್ನುಳಿದ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ, ಔದ್ಯೋಗಿಕ ರಸಾಯನಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಭೌತ ಶಾಸತ್ರ, ಸಸ್ಯ ಶಾಸತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಪ್ರಾಣಿಶಾಸ್ತ್ರ, ಎಂ. ಕಾಂ.ಗಳಲ್ಲಿ ಅತೀ ಹೆಚ್ಚು ಅಂಕ ಪಡೆ ದವರಿಗೂ ಸ್ವರ್ಣ ಪದಕ, ನಗದು ಬಹುಮಾನ ನೀಡಲಾಗುವುದು ಎಂದರು.
ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್

ಖ್ಯಾತ ಸಮಾಜ ವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ ಕೆ.ವಿ. ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನ ಮಾಜಿ ನಿರ್ದೇಶಕ ಪ್ರೊ. ಎಚ್. ಎ. ರಂಗನಾಥ್ ಅವರಿಗೆ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟ ರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕುಲ ಸಚಿವ ಹೇಮಂತ್ ಎನ್ ,ಮೌಲ್ಯ ಮಾಪನ ಕುಲಸಚಿವ ಪ್ರೊ.ಆರ್. ತಿಮ್ಮರಾಯಪ್ಪ, ವಾಣಿಜ್ಯ ನಿಕಾಯದ ಡೀನ್ ಪ್ರೊ. ರಮೇಶ್, ಕಲಾ ನಿಕಾಯದ ಡೀನ್, ಪ್ರೊ. ರಾಜಾನಾಯ್ಕ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಸತ್ಯಪ್ರಕಾಶ್ ಉಪಸ್ಥಿತರಿದ್ದರು.














