Home Shivamogga ಸಾಗರ/ ಓರ್ವ ಅರಣ್ಯ ಅಧಿಕಾರಿ ಅಮಾನತ್ತು ಬೆನ್ನಲ್ಲೇ ಇನ್ನಿಬ್ಬರ ಅಮಾನತ್ತು..!!

ಸಾಗರ/ ಓರ್ವ ಅರಣ್ಯ ಅಧಿಕಾರಿ ಅಮಾನತ್ತು ಬೆನ್ನಲ್ಲೇ ಇನ್ನಿಬ್ಬರ ಅಮಾನತ್ತು..!!

29
0

ಸಾಗರ:ಮೇ.13: ಸಾಗರದ ಮಾಲ್ವೆ ಗ್ರಾಮದ ಅರಣ್ಯದಲ್ಲಿ ನೂರಾರು ಅಕೇಶಿಯಾ ಮತ್ತು ಇತರ ಕಾಡು ಮರಗಳನ್ನು ಅಕ್ರಮವಾಗಿ ಕಡಿಯಲು ಅಪರಾಧಿಗೆ ಅನುಕೂಲ ಮಾಡಿದ ಹಿನ್ನೆಲೆಯಲ್ಲಿ ಮೇ.11 ರಂದು ಸಾಗರ ವಲಯ ಅರಣ್ಯಾಧಿಕಾರಿ ಬಿ.ಅಣ್ಣಪ್ಪ ಅವರನ್ನು ಅಮಾನತ್ತುಗೊಳಿಸಿದ್ದು, ಈಗ ಈ ಪ್ರಕರಣಕ್ಕೆ ಸಂಬಧಪಟ್ಟಂತೆ ಇನ್ನಿಬ್ಬರು ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೇ.13 ರಂದು ಆದೇಶಿಸಿದ್ದಾರೆ.

ಸಾಗರ ತಾಲ್ಲೂಕಿನ ಮಾಲ್ವೆ ಗ್ರಾಮದ ಸರ್ವೇ ನಂ 43 ರ ಅರಣ್ಯ ಇಲಾಖೆಯ ಪರಿಹಾರಾತ್ಮಕ ಅರಣ್ಯ ಪ್ರದೇಶದ ನೆಡುತೋಪು ಸೊಪಿನಬೆಟ್ಟದಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ನಿಯಮಾನು ಬಾಹಿರ ರಸ್ತೆ ನಿರ್ಮಿಸಿ ಬೆಳೆದಿದ್ದ ನೂರಾರು ಅಕೇಶಿಯಾ ಮತ್ತು ಇತರ ಕಾಡು ಮರಗಳನ್ನು ಅಕ್ರಮವಾಗಿ ಕಡಿಯಲು ಅಪರಾಧಿಗಳಿಗೆ ಅರಣ್ಯಾಧಿಕಾರಿಗಳು ಅನುಕೂಲ ಮಾಡಿಕೊಟ್ಟಿದ್ದರು.

ಈ ಬಗ್ಗೆ ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡಲಾಗಿದೆ ಎಂಬ ಗಂಭೀರ ದೂರು ಕೂಡ ಕೇಳಿಬಂದಿತ್ತು.ಈ ಪ್ರಕರಣಕ್ಕೆ ಸಂಬಂದಪಟ್ಟಂತೆ ಎಫ್.ಐ.ಆರ್ ದಾಖಲು ಮಾಡಲಾಗಿತ್ತು. ಅಪರಾಧ ನಡೆದ ಸ್ಥಳವು ‘ಅರಣ್ಯ ಪ್ರದೇಶದ ಹೊರಗೆ’ ಎಂದು ನಮೂದಿಸುವ ಮೂಲಕ ಆರೋಪಿಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳು ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಅದರಂತೆ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿ 2021ರ ನಿಯಮಗಳನ್ನು ಉಲ್ಲಂಘಿಸಿರುವುದು ಮತ್ತು ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆಯುವಲ್ಲಿ ವಿಫಲರಾಗಿರುವುದು ತನಿಖಾ ವರದಿಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕೆಳದಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಜೆ.ವಿಜಯಕುಮಾರ್, ಗಸ್ತು ಅರಣ್ಯ ಪಾಲಕ ಶಿವನಗೌಡ ದೊಡ್ಡಬಪ್ಪನವರ್ ಮೇ.13 ರಂದು ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಕೆ.ಟಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.