✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ : ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಪಕ್ಷಗಳ ಶಾಸಕರ ನಿಯೋಗದೊಂದಿಗೆ ಆರೋಗ್ಯ ಸಚಿವರನ್ನು ಭೇಟಿ ಮಾಡಿ, ಅಗತ್ಯ ವೈದ್ಯರ ನೇಮಕಾತಿಗೆ ಪ್ರಯತ್ನ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಅವರು ಇಂದು ಜಿಲ್ಲಾ ಪಂಚಾಯತ್ ಅಲ್ಲಿ ನಡೆದ 2025-26 ನೇ ಸಾಲಿನ ತ್ರೈಮಾಸಿಕ ಜಿಲ್ಲಾ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಜೆಪಿ ಶಾಸಕರಾದ ಆರಗ ಜ್ಞಾನೇಂದ್ರ, ಡಾ.ಧನಂಜಯ್ ಸರ್ಜಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಟರಾಜ್ ಮಾತನಾಡಿ, ಜಿಲ್ಲೆಯ 18 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದೆ. ನೇಮಕಾತಿಗೆ ಸಾಕಷ್ಟು ಬಾರಿ ಜಾಹೀರಾತು ನೀಡಿದ್ದೇವೆ, ಯಾರು ಬರುತ್ತಿಲ್ಲ ಎಂದರು.
ಆರೋಗ್ಯಾಧಿಕಾರಿಗಳ ಮಾತಿಗೆ ಆಕ್ಷೇಪ ವ್ಯಕ್ತಪಡಿ ಸಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು, ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ಇದ್ದು ಇಲ್ಲದಂತಾಗಿದೆ. ಕಳೆದ ಒಂದು ವಾರದಲ್ಲಿ ಐದಾರು ಅಕ್ಸಿಡೆಂಟ್ ಪ್ರಕರಣಗಳಾಗಿವೆ. ಅಪಘಾತಕ್ಕೆ ಒಳಗಾದವರು ಆಸ್ಪತ್ರೆಗೆ ಹೋದರೆ ಅಲ್ಲಿ ಚಿಕಿತ್ಸೆ ಕೊಡುವವರಿಲ್ಲ. ಪರಿಸ್ಥಿತಿ ಹೀಗಾದರೆ ಏನು? ಪ್ರಶ್ನಿಸಿದರು.
ವಿಧಾನ ಪರಿಷತ್ ಶಾಸಕ ಡಾ. ಧನಂಜಯ್ ಸರ್ಜಿ ಅವರು ಮಾತನಾಡಿ, ವೈದ್ಯರ ನೇಮಕದ ವಿಚಾರ ದಲ್ಲಿ ಎಂಬಿಬಿಎಸ್ ಮಾಡಿದವರೆ ಬೇಕೆಂದು ಕೂತರೆ ಯಾರು ಸಿಗುವುದಿಲ್ಲ, ಪಿ ಜಿ ಮಾಡಿದವರನ್ನು ಯಾಕೆ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಜಿಪಂ ಸಿಇಓ ಎನ್. ಹೇಮಂತ್ ಇದಕ್ಕೆ ಪ್ರತಿಕ್ರಿ ಯಿಸಿ, ಪಿಜಿ ಅವರು ಬರ್ತಾರೆ, ಆದರೆ ಅವರು ತಮ್ಮ ದೇ ಊರುಗಳ ಹತ್ತಿರವೇಕೆಲಸ ಕೊಡಿ ಅಂತಾರೆ. ಹಾಗಾಗಿ ಸಾಕಷ್ಟು ತೊಂದರೆ ಆಗುತ್ತಿದೆ ಎಂದು ಸಮಜಾಯಿಸಿ ನೀಡಿದರು.
ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಡಿಎಚ್‌ಒ ಅವರು ಈಬಗ್ಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ತುಮರಿ ಬ್ಯಾಕೋಡು ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ವೈದ್ಯರನ್ನು ಕೊಡಿ ಎಂದು ಅನೇಕ ಸಲ ಹೇಳಿದರೆ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಶಾಸಕರು,ಅಧಿಕಾರಿಗಳಮಾತುನ್ನು ಆಲಿಸಿದ ಸಚಿವ ಮಧು ಬಂಗಾರಪ್ಪ ಪತ್ರಿಕ್ರಿಯಿಸಿ, ವೈದ್ಯರ ನೇಮಕದ ವಿಚಾರ ಇಲ್ಲಿ ಬಗೆಹರಿಯುವು ದಿಲ್ಲ, ಆರೋಗ್ಯ ಸಚಿವರೊಂದಿಗೆ ಮಾತನಾಡೊಣ ಎಂದರು.
















