Home Shivamogga ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಬೀಕರ ಅಪಘಾತ ಇಬ್ಬರ ದುರ್ಮರಣ..!!

ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಬೀಕರ ಅಪಘಾತ ಇಬ್ಬರ ದುರ್ಮರಣ..!!

20
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಸಮೀಪದ ಶ್ರೀ ಸಪ್ತಕೋಟಿ ಪೆಟ್ರೋಲ್‌ ಬಂಕ್‌ ಮುಂಭಾಗ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಮೃತರನ್ನು ಹಿತ್ತಲ ಗ್ರಾಮದ ಸೈಯದ್ ಅಪ್ಕಾನ್ (21) ಹಾಗೂ ಅರಿಶಿನಗೇರಿ ಗ್ರಾಮದ ರಾಜು (21) ಎಂದು ಗುರುತಿಸಲಾಗಿದೆ. ಸೈಯದ್ ಅಪ್ಕಾನ್ ಅಪಘಾತ ನಡೆದ ತಕ್ಷಣವೇ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಾಜುವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತ ಹೇಗೆ ಸಂಭವಿಸಿತು?

ಶಿಕಾರಿಪುರದಿಂದ ಶಿವಮೊಗ್ಗದತ್ತ ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸುತ್ತಿತ್ತು. ಇದೇ ವೇಳೆ ಶಿವಮೊಗ್ಗ ಕಡೆಯಿಂದ ಶಿಕಾರಿಪುರದತ್ತ ಪಲ್ಸರ್‌ ಬೈಕ್‌ನಲ್ಲಿ ಸೈಯದ್ ಅಪ್ಕಾನ್ ಹಾಗೂ ರಾಜು ತೆರಳುತ್ತಿದ್ದರು. ಸುತ್ತುಕೋಟೆಯ ಶ್ರೀ ಸಪ್ತಕೋಟಿ ಪೆಟ್ರೋಲ್‌ ಬಂಕ್‌ ಸಮೀಪ ಬಂದಾಗ ಬೈಕ್‌ ಹಾಗೂ ಬರುತ್ತಿದ್ದ ಬಸ್‌ಗೆ ಮುಖಾಮುಖಿಯಾಗಿ ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ಸ್ಥಳದಲ್ಲೇ ಸೈಯದ್ ಅಪ್ಕಾನ್ ಮೃತಪಟ್ಟಿದ್ದು ಹಾಗೆ ಬೈಕ್ ನ ಹಿಂಬದಿ ಕೂತಿದ್ದ ರಾಜು ಗೆ ತೀವ್ರ ಹೊಡೆತ ಬಿದ್ದಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮೃತಪಟ್ಟಿರದ್ದಾಗಿ ತಿಳಿದು ಬಂದಿದೆ.

ಡಿಕ್ಕಿಯ ತೀವ್ರತೆಗೆ ಬೈಕ್‌ ನೇರವಾಗಿ ಬಸ್‌ನ ರೇಡಿಯೇಟರ್‌ ಭಾಗಕ್ಕೆ ನುಗ್ಗಿ ಸಿಲುಕಿಕೊಂಡಿದ್ದು, ಸ್ಥಳದಲ್ಲೇ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ ಪ್ರಯಾಣಿಕರಲ್ಲಿ ಆತಂಕ ಭಯಭೀತರಾಗಿ ಎಮರ್ಜನ್ಸಿ ಡೋರ್‌ ಹಾಗೂ ಕಿಟಕಿಗಳ ಮೂಲಕ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್‌ಪಿ ಸಂಜೀವ್‌ ಕುಮಾರ್‌, ಕುಂಸಿ ಠಾಣೆಯ ಪಿಎಸ್‌ಐ ಪಾರ್ವತಿ ಬಾಯಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.