Home Blog ಹೊನಗೋಡು ರಸ್ತೆ ಖಾಸಗಿ ವ್ಯಕ್ತಿಯಿಂದ ಒತ್ತುವರಿ, ಸರಿಪಡಿಸಲು 3 ದಿನ ಗಡವು..!!

ಹೊನಗೋಡು ರಸ್ತೆ ಖಾಸಗಿ ವ್ಯಕ್ತಿಯಿಂದ ಒತ್ತುವರಿ, ಸರಿಪಡಿಸಲು 3 ದಿನ ಗಡವು..!!

39
0

✒️.. ಅಮಿತ್ ಆರ್ ಆನಂದಪುರ

ಸಾಗರ: ಸಾರ್ವಜನಿಕ ರಸ್ತೆಗೆ ಹಾನಿ ಮಾಡಿ ಆರ್ ಸಿಸಿ ಪೈಪ್ ಲೈನ್ ತೆಗೆದಿರುವ ಬಗ್ಗೆ ತಾಲ್ಲೂಕಿನ ಕುದರೂರು ಗ್ರಾಮಸ್ಥರ ದೂರು ಹಿನ್ನೆಲೆಯಲ್ಲಿ ದೇವರಾಜ್ ಜೈನ್ ಎಂಬಾತನಿಗೆ ಕುದರೂರು ಗ್ರಾಮ ಪಂಚಾಯ್ತಿ ನೋಟಿಸ್ ನೀಡಿದೆ.

ತಾಲ್ಲೂಕಿನ ಕರೂರು ಹೋಬಳಿ ಕುದರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನಗೋಡು ಗ್ರಾಮಕ್ಕೆ ಸಾರ್ವಜನಿಕ ಸಂಪರ್ಕ ಕಲ್ಪಿಸುವ ರಸ್ತೆ ಹಾನಿ ಮಾಡಿ ಆರ್ ಸಿಸಿ ಪೈಪ್ ತೆಗೆದಿದ್ದಾರೆ.

ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣವಾಗಿರುವ ಹೊನಗೋಡು ಸಂಪರ್ಕ ರಸ್ತೆಯನ್ನು ಉದ್ದೇಶ ಪೂರ್ವಕವಾಗಿ ಅಗೆದು, ಅಲ್ಲಿ ಹಾಕಾಲಾಗಿದ್ದ ಆರ್ ಸಿ ಸಿ ಪೈಪ್ ತೆಗೆದು, ರಸ್ತೆಯನ್ನು ಒತ್ತುವರಿ ಮಾಡಿ ಮಾರ್ಗವನ್ನು ಸಹ ಬದಲಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಳೆಗಾಲ ಆರಂಭವಾಗಿರುವ ಕಾರಣ ಚರಂಡಿ, ಪೈಪ್ ಇಲ್ಲದೆ ರಸ್ತೆಯಲ್ಲಿ ಕೆಸರು ಉಂಟಾಗಿದೆ. ಮಳೆ ಬಂದರೆ ರಸ್ತೆ ಮಣ್ಣು ಕೊಚ್ಚಿಕೊಂಡು ಹೋಗಲಿದೆ. ಪ್ರತಿ ನಿತ್ಯ ಶಾಲಾ ವಿದ್ಯಾರ್ಥಿಗಳು ಸಹ ಇದೇ ರಸ್ತೆಯಲ್ಲಿ ಸಂಚಾರ ಮಾಡಲಿದ್ದು
ಸಂಚಾರಕ್ಕೆ ಸಂಕಷ್ಟ ಉಂಟಾಗುತ್ತಿದೆ. ತಕ್ಷಣವೇ ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರು ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕುದರೂರು ಗ್ರಾಮ ಪಂಚಾಯ್ತಿ ಪಿಡಿಒ ಇಮ್ತಿಯಾಜ್ ಪಾಷ ರಸ್ತೆ ಸರಿಪಡಿಸುವಂತೆ ಈಗಾಗಲೇ ನೋಟಿಸ್ ನೀಡಲಾಗಿದೆ. ಮೂರು ದಿನಗಳಲ್ಲಿ ಸರಿಪಡಿಸದಿದ್ದಲ್ಲಿ ಪಂಚಾಯತ್ ರಾಜ್ ನಿಯಮ 1993 ರಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜಾಹೀರಾತು.: