ಶಿಕಾರಿಪುರ: ಶಿಕಾರಿಪುರ ಟೌನ್ ಯಾತ್ರಿ ನಿವಾಸದ ಬಳಿ ಅಕ್ರಮ ವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶಿಕಾರಿಪುರ ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳಿಂದ ಸಾವಿರಾರು ರೂಪಾಯಿ ಮೌಲ್ಯದ ಗಾಂಜಾ ವನ್ನು ಜಪ್ತಿ ಮಾಡಲಾಗಿದೆ.
ಶಿಕಾರಿಪುರ ಟೌನ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ತಂಡ, ದಿಢೀರ್ ದಾಳಿ ನಡೆಸಿ 32 ವರ್ಷದ ಸುನೀಲ್ ನಾಯ್ಡು ಹಾಗೂ 30 ವರ್ಷದ ಸುನೀಲ್ ಟಿ.ವಿ ಎಂಬಿಬ್ಬರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ.
ಬಂಧಿತ ಆರೋಪಿಗಳಿಂದ ಅಂದಾ ಜು15,000 ರೂಪಾಯಿ ಮೌಲ್ಯದ ಒಟ್ಟು 658 ಗ್ರಾಂ ತೂಕದ ಗಾಂಜಾ ವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.













