ಸಾಗರ: ತಾಲೂಕಿನ ಯಲಗಳಲೆ ಗ್ರಾಮದ ನಾಗೇಂದ್ರ ಅವರ ಪುತ್ರ ನಿರಂಜನ ಎಂಬ ವಿದ್ಯಾರ್ಥಿ ಜುಲೈ 11ರಂದು ಮನೆಯಿಂದ ಹೊರಟಿದ್ದು, ಇದುವರೆಗೆ ಮನೆಗೆ ಮರಳಿಲ್ಲ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ ನಿರಂಜನ, ಸಾಗರದ ಎಂಡಿಎಫ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಕುಟುಂಬದಲ್ಲಿ ನಡೆದ ಸಣ್ಣ ಮನಸ್ತಾಪದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋಗಿರುವುದಾಗಿ ತಿಳಿದುಬಂದಿದೆ.

ಬಟ್ಟೆಮಲ್ಲಪ್ಪ, ಹೊಸನಗರ, ಹೊಸಂಗಡಿ ಹಾಗೂ ಸಿದ್ದಾಪುರ ಭಾಗಗಳಲ್ಲಿ ಕೆಲಸ ಕೇಳಿಕೊಂಡು ಓಡಾಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.
ಮಗ ಮನೆಗೆ ಮರಳದ ಹಿನ್ನೆಲೆಯಲ್ಲಿ ತಾಯಿ ಜಯಲಕ್ಷ್ಮಿ ನಾಗೇಂದ್ರ ಆತಂಕದಲ್ಲಿದ್ದು, “ನಿರಂಜನ, ಎಲ್ಲಿದ್ದರೂ ಸುರಕ್ಷಿತವಾಗಿ ಮನೆಗೆ ಮರಳಬೇಕು” ಎಂದು ಮನವಿ ಮಾಡಿದ್ದಾರೆ.
ನಿರಂಜನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ 99017 60207 ಅಥವಾ 94492 42282 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕುಟುಂಬದವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಜಾಹೀರಾತು












