✒️..ಅಮಿತ್ ಆರ್ ಆನಂದಪುರ
ಸಾಗರ(ತ್ಯಾಗರ್ತಿ), ಜು.19: ಮಳೆಯಿಂದ ಇಂದು ಬೆಳಿಗ್ಗೆ ತ್ಯಾಗರ್ತಿ ಗ್ರಾಮದ ನಿವಾಸಿ ಮುತ್ತಮ್ಮ ಬಿನ್ ಉಪ್ಪಾರ ಚನ್ನಪ್ಪ ಅವರ ಮನೆ ಸಂಪೂರ್ಣವಾಗಿ ಕುಸಿದು ಹಾನಿಗೊಳಗಾಗಿದೆ.
ಶಾಸಕ ಗೋಪಾಲಕೃಷ್ಣ ಬೇಳೂರು ಮಾರ್ಗದರ್ಶನದಂತೆ ಶಾಸಕರ ಆಪ್ತ ಸಹಾಯಕ ಶ್ರೀನಿವಾಸ್ ಮೂರ್ತಿ, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಹಾಗೂ ಚೇತನ್ ರಾಜ್ ಕಣ್ಣೂರು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.

ಸಂತ್ರಸ್ತ ಕುಟುಂಬದ ಸಮಸ್ಯೆಗಳನ್ನು ಆಲಿಸಿದ ಅವರು, ಶಾಸಕರ ಪರವಾಗಿ ವೈಯಕ್ತಿಕ ಧನಸಹಾಯ ನೀಡಿ ಧೈರ್ಯ ತುಂಬಿದರು. ಅಲ್ಲದೆ, ಆದಷ್ಟು ಬೇಗ ಸರ್ಕಾರದಿಂದ ದೊರೆಯಬೇಕಿರುವ ಪರಿಹಾರ ಹಾಗೂ ನೆರವು ಸಂತ್ರಸ್ತರಿಗೆ ತಲುಪುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಾಹೀರಾತು:












