Home Shivamogga Sagara ಗೃಹಜ್ಯೋತಿ ಪರಿಶೀಲನೆಗೆ ಅಗತ್ಯ ದಾಖಲೆ ಸಿದ್ಧವಾಗಿರಲಿ: ರವಿಕುಮಾರ್..!!

ಗೃಹಜ್ಯೋತಿ ಪರಿಶೀಲನೆಗೆ ಅಗತ್ಯ ದಾಖಲೆ ಸಿದ್ಧವಾಗಿರಲಿ: ರವಿಕುಮಾರ್..!!

37
0

ಆನಂದಪುರ, ಜು.19: ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಮನೆ ಪರಿಶೀಲನೆ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಳ್ಳುವಂತೆ ಬಗರ್ ಹುಕುಂ ಸಮಿತಿಯ ಸದಸ್ಯ ರವಿಕುಮಾರ್ ಮನವಿ ಮಾಡಿದ್ದಾರೆ.

ಇವರು ಆನಂದಪುರದ ಕೆಲ ಭಾಗಗಳಲ್ಲಿ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಮಾಹಿತಿ ಪತ್ರ (ಫಾರಂ) ವಿತರಿಸಿ ಮಾತನಾಡಿ, ಗೃಹಜ್ಯೋತಿ ಪರಿಶೀಲನೆ ವೇಳೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ರೇಷನ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಆಧಾರ್‌ಗೆ ನೋಂದಾಯಿತ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದರು.

ಪ್ರಸ್ತುತ ಹಲವಾರು ಬಾಡಿಗೆದಾರರು ಬಾಡಿಗೆ ಕರಾರು ಪತ್ರ ಮಾಡಿಕೊಂಡಿಲ್ಲ ಎಂಬುದು ಗಮನಕ್ಕೆ ಬಂದಿದ್ದು, ಅಂತಹವರು ಯಾವುದೇ ವಿಳಂಬ ಮಾಡದೆ ಆದಷ್ಟು ಬೇಗ ಕರಾರು ಪತ್ರ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು. ಇದರಿಂದ ಪರಿಶೀಲನೆ ವೇಳೆ ಉಂಟಾಗುವ ಅನಗತ್ಯ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು ಎಂದರು.

ಗ್ಯಾರೆಂಟಿ ಯೋಜನೆ ಸಮಿತಿಯ ಸದಸ್ಯೆ ಸಿರಿಜಾನ್ ಮಾತನಾಡಿ, “ಗೃಹಜ್ಯೋತಿ ಯೋಜನೆಯ ಪರಿಶೀಲನೆ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕಾರಿಗಳು ಹಾಗೂ ಪರಿಶೀಲನಾ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡಬೇಕು. ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಂಡರೆ ಪರಿಶೀಲನೆ ಸುಗಮವಾಗಿ ನಡೆಯಲಿದೆ. ಯಾವುದೇ ಅರ್ಹ ಫಲಾನುಭವಿಯೂ ದಾಖಲೆಗಳ ಕೊರತೆಯಿಂದ ಯೋಜನೆಯ ಸೌಲಭ್ಯದಿಂದ ವಂಚಿತರಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು,” ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆನಂದಪುರ ಮೆಸ್ಕಾಂ ಸಹಾಯಕ ಇಂಜಿನಿಯರ್ ಯೋಗೇಂದ್ರಪ್ಪ ಹಾಗೂ ಸಿಬ್ಬಂದಿ ಕಿರಣ್ ಉಪಸ್ಥಿತರಿದ್ದರು.

ಜಾಹೀರಾತು: