ಆನಂದಪುರ: ಆನಂದಪುರ ಸಮೀಪದ ಯಡೇಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಹಳಿಯ ಡ್ರೈನೇಜ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 20ರ ಬೆಳಿಗ್ಗೆ 1.00 ಗಂಟೆಯಿಂದ ಜುಲೈ 30ರ ರಾತ್ರಿ 12.59 ಗಂಟೆಯವರೆಗೆ ರೈಲ್ವೆ ಗೇಟ್ ಮೂಲಕ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಗರ–ಶಿವಮೊಗ್ಗ ರಾಷ್ಟ್ರೀಯ ಎಂದಿನಂತೆ ವಾಹನ ಸಂಚಾರ..
ಆನಂದಪುರದಿಂದ ಬಟ್ಟೆಮಲ್ಲಪ್ಪ ಮಾರ್ಗ ಸಂಪೂರ್ಣ ಬಂದ್ ಆಗಲಿದೆ. ಆದರೆ ಸಾಗರ–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತೆ ಮುಂದುವರಿಯಲಿದ್ದು, ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪರ್ಯಾಯ ಮಾರ್ಗಗಳು:
1. ಆನಂದಪುರದಿಂದ ಹೊಸನಗರಕ್ಕೆ ತೆರಳುವವರು:ಯಡೇಹಳ್ಳಿ – ರಿಪ್ಪನಪೇಟೆ ರಸ್ತೆ – ಹಾಲುಗುಡ್ಡೆ – ಬಟ್ಟೆಮಲ್ಲಪ್ಪ – ಹೊಸನಗರ ಮಾರ್ಗವನ್ನು ಬಳಸಬೇಕು.
2. ಯಡೇಹಳ್ಳಿ– ಕೊರ್ಲಿಕೊಪ್ಪ – ಗೇರುಬೀಸ್ – ಬಟ್ಟೆಮಲ್ಲಪ್ಪ – ಹೊಸನಗರ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಚಾಲಕರು ನಿಗದಿಪಡಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಆನಂದಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಮನವಿ ಮಾಡಿದ್ದಾರೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸದೆ, ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ಸಂಚರಿಸುವಂತೆ ಅವರು ಕೋರಿದ್ದಾರೆ.
ಜಾಹೀರಾತು












