ಮನೆ Blog ಭರತನಾಟ್ಯ ಪರೀಕ್ಷೆಯಲ್ಲಿ ಅನಂದಪುರದ ದಿವ್ಯ ಚೇತನ್ ವಿದ್ಯಾರ್ಥಿ ಪ್ರಥಮ ಹಂತದಲ್ಲಿ ತೇರ್ಗಡೆ..!!

ಭರತನಾಟ್ಯ ಪರೀಕ್ಷೆಯಲ್ಲಿ ಅನಂದಪುರದ ದಿವ್ಯ ಚೇತನ್ ವಿದ್ಯಾರ್ಥಿ ಪ್ರಥಮ ಹಂತದಲ್ಲಿ ತೇರ್ಗಡೆ..!!

202
0

ಆನಂದಪುರ:

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲಾ ವಿಶ್ವವಿದ್ಯಾಲಯ ಅಡಿಯಲ್ಲಿ 2025 ಮೇ ತಿಂಗಳಲ್ಲಿ ಶಿರಸಿಯಲ್ಲಿ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಆನಂದಪುರದ ದಿವ್ಯಾ ಚೇತನ್ ನವರ ವಿದ್ಯಾರ್ಥಿಗಳು 100 ಕ್ಕೆ 100 ಫಲಿತಾಂಶ ವನ್ನು ಗಳಿಸಿದ್ದಾರೆ.

ನಾಟ್ಯ ತರಂಗ ಟ್ರಸ್ಟ್ (ರಿ) ಸಾಗರ ಶ್ರೀ ವಿದ್ವಾನ್ ಜಿ ಬಿ ಜನಾರ್ಧನ್ ಭಟ್ ಇವರ ಮಾರ್ಗದರ್ಶನದಲ್ಲಿ ಶ್ರೀಮತಿ ದಿವ್ಯಚೇತನ್ ರವರು ಆನಂದಪುರದ ಕನ್ನಡ ಸಂಘದಲ್ಲಿ ಭರತನಾಟ್ಯ ತರಗತಿಯನ್ನು ನಡೆಸುತ್ತಿದ್ದು ಇವರ ವಿದ್ಯಾರ್ಥಿಗಳಾದ ತಾವರೆಹಳ್ಳಿಯ ರೂಪ ಮತ್ತು ಮಂಜುನಾಥ ರವರ ಮಗಳಾದ ಪ್ರೇಕ್ಷ, ಆನೆ ಗದ್ದೆ ಹುಂಚದ ಸುಮಿತ್ರ ಮತ್ತು ಸತೀಶ್ ರವರ ಮಗಳಾದ ನಂದಿತಾ, ಆನಂದಪುರದ ವಾಣಿ ಅಯ್ಯಂಗಾರ್ ಮತ್ತು ಅಚ್ಚುತನ್ ಅಯ್ಯಂಗಾರ್ ರವರ ಮಗಳಾದ ಲಿಪಿಕಾ ಅಯ್ಯಂಗಾರ್, ಗೀಳಾಲಗುಂಡಿಯ ಶೋಭಾ ಮತ್ತು ರಾಜೇಂದ್ರ ರವರ ಮಗಳಾದ ಐಶ್ವರ್ಯ ಮತ್ತು ಸೌಂದರ್ಯ ರವರು ಉನ್ನತ ಶ್ರೇಣಿಯಲ್ಲಿ ಭರತನಾಟ್ಯದ ಮೊದಲ ಹಂತದ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶದಂತೆ ಉತ್ತೀರ್ಣರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ದಿವ್ಯ ಚೇತನ್ ರವರು ಪ್ರತಿ ಶನಿವಾರ ಮತ್ತು ಭಾನುವಾರ ಭರತನಾಟ್ಯ ತರಗತಿಯನ್ನು ಆನಂದಪುರದ ಕನ್ನಡ ಯುವಕ ಸಂಘದ ಸಭಾಂಗಣದಲ್ಲಿ ನಡೆಸುತ್ತಿದ್ದು ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಿ: 9538684676

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ಅನ್ನು ಜಾಯಿನ್ ಆಗಲು ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t