ಹೊಸನಗರ: ತಾಲ್ಲೂಕಿನ ರಿಪ್ಪನ್ ಪೇಟೆ ಪಟ್ಟಣದ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಆಕಸ್ಮಿಕ ಅವಘಡ ಸಂಭವಿಸಿದ್ದು, ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ಶಿಕ್ಷಕರ ತಲೆಗೆ ಬಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಶಿಕ್ಷಕರನ್ನು ಪಟ್ಟಣದ ಮೇರಿಮಾತಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕಮಲಾಕರ್ ಎಂದು ಗುರುತಿಸಲಾಗಿದೆ.

ಕ್ರೀಡಾಕೂಟದ ವೇಳೆ ಡಿಸ್ಕಸ್ ಥ್ರೋ ಸ್ಪರ್ಧೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ಆಕಸ್ಮಿಕವಾಗಿ ಕ್ರೀಡಾಂಗಣದಲ್ಲಿ ಇದ್ದ ಶಿಕ್ಷಕ ಕಮಲಾಕರ್ ಅವರ ತಲೆಗೆ ಬಿದ್ದಿದೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ರಕ್ತಸ್ರಾವ ಉಂಟಾಗಿದೆ.
ತಕ್ಷಣ ಅವರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.ಸದ್ಯದ ಮಾಹಿತಿ ಪ್ರಕಾರ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜಾಹೀರಾತು












