Home Shivamogga Sagara ಆಟೋ ಚಾಲಕನಾಗಿ ಕುಟುಂಬಕ್ಕೆ ಆಸರೆಯಾಗಿದ್ದ ಸಿದ್ದಿಕ್: ಆಸ್ಪತ್ರೆ ಕರೆದೊಯ್ಯುತ್ತಿದ್ದಂತೆ ಸಾವು..!!

ಆಟೋ ಚಾಲಕನಾಗಿ ಕುಟುಂಬಕ್ಕೆ ಆಸರೆಯಾಗಿದ್ದ ಸಿದ್ದಿಕ್: ಆಸ್ಪತ್ರೆ ಕರೆದೊಯ್ಯುತ್ತಿದ್ದಂತೆ ಸಾವು..!!

0
67

ಸಾಗರ(ಆನಂದಪುರ): ಆನಂದಪುರ–ಶಿಕಾರಿಪುರ ಹೆದ್ದಾರಿಯ ದಾಸಕೊಪ್ಪ ಮಸೀದಿ ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮೊಹಮ್ಮದ್ ಸಿದ್ದಿಕ್ ಮೃತಪಟ್ಟಿರುವ ಘಟನೆ ನಡೆದಿದೆ.

ಪ್ರಾಥಮಿಕ ಮಾಹಿತಿಯಂತೆ, ಆನಂದಪುರದಿಂದ ಗೌತಮಪುರದ ಬಿಲಗುಂಜಿ ಗ್ರಾಮಕ್ಕೆ ತೆರಳುತ್ತಿದ್ದ ತೀರ್ಥೇಶ್‌ 25 ವರ್ಷ (ಈಶ್ವರ ಗೌಡ) ಹಾಗೂ ಮಸೀದಿ ಪಕ್ಕದ ರಸ್ತೆಯಿಂದ ಹೆದ್ದಾರಿಗೆ ಬರುತ್ತಿದ್ದ ಮೊಹಮ್ಮದ್ ಸಿದ್ದಿಕ್‌ 26 ವರ್ಷ (ರಾಜೀವುಲ್ಲಾ) ಅವರ ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದಿಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಂತೆ ಮೃತಪಟ್ಟಿದ್ದಾರೆ ಎಂದು ಇದೀಗ ಲಭಿಸಿರುವ ಮಾಹಿತಿ ತಿಳಿಸಿದೆ.

ಮೃತ ಸಿದ್ದಿಕ್ ಅವರಿಗೆ ತಂದೆ ಇರಲಿಲ್ಲ,ಆಟೋ ಓಡಿಸುತ್ತಾ ಮನೆಗೆ ಜವಾಬ್ದಾರಿ ಹೊತ್ತು ತಾಯಿಗೆ ಆಸರೆಯಾಗುತ್ತ ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.

ತೀರ್ಥೇಶ್ ಅವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಆನಂದಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

NO COMMENTS