ಸಾಗರ(ಆನಂದಪುರ): ಆನಂದಪುರ–ಶಿಕಾರಿಪುರ ಹೆದ್ದಾರಿಯ ದಾಸಕೊಪ್ಪ ಮಸೀದಿ ಬಳಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಪ್ರಾಥಮಿಕ ಮಾಹಿತಿಯಂತೆ, ಆನಂದಪುರದಿಂದ ಗೌತಮಪುರದ ಬಿಲಗುಂಜಿ ಗ್ರಾಮಕ್ಕೆ ತೆರಳುತ್ತಿದ್ದ ತೀರ್ಥೇಶ್ (ಈಶ್ವರ ಗೌಡ) ಹಾಗೂ ಮಸೀದಿ ಪಕ್ಕದ ರಸ್ತೆಯಿಂದ ಹೆದ್ದಾರಿಗೆ ಬರುತ್ತಿದ್ದ ಮೊಹಮ್ಮದ್ ಸಿದ್ದಿಕ್ (ರಾಜೀವುಲ್ಲಾ) ಅವರ ಬೈಕ್ಗಳ ನಡುವೆ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಮೊಹಮ್ಮದ್ ಸಿದ್ದಿಕ್ ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆನಂದಪುರದಿಂದ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ತೀರ್ಥೇಶ್ ಅವರನ್ನೂ ಕೂಡ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸದ್ಯಕ್ಕೆ ಮಾಹಿತಿ ಲಭಿಸಿದೆ.
ಸ್ಥಳಕ್ಕೆ ಆನಂದಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.











