ಮನೆ Blog ಬಿಜೆಪಿಯವರು ಧರ್ಮಸ್ಥಳವನ್ನು ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಹಿಂದುತ್ವ ಮಾಡಲು ಹೊರಟಿದ್ದಾರೆ ಇವರಿಗೆ ನಾಚಿಕೆಯಾಗಬೇಕು : ಕಿಡಿಕಾರಿದ...

ಬಿಜೆಪಿಯವರು ಧರ್ಮಸ್ಥಳವನ್ನು ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಹಿಂದುತ್ವ ಮಾಡಲು ಹೊರಟಿದ್ದಾರೆ ಇವರಿಗೆ ನಾಚಿಕೆಯಾಗಬೇಕು : ಕಿಡಿಕಾರಿದ ಗೋಪಾಲಕೃಷ್ಣ ಬೇಳೂರು..!!

229
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.63481444, 0.4234894);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ಆನಂದಪುರ:

ಬಿಜೆಪಿಯವರು ಧರ್ಮಸ್ಥಳವನ್ನು ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಹಿಂದುತ್ವ ಮಾಡಲು ಹೊರಟಿದ್ದಾರಲ್ಲ ಇವರಿಗೆ ನಾಚಿಕೆ ಆಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದರು.

ಇವರು ಆನಂದಪುರ ಸುತ್ತಮುತ್ತಲಿನ ಗಣಪತಿ ವಿಸರ್ಜನಾ ಮೆರವಣಿಗೆಗೆ ಪಾಲ್ಗೊಂಡು ನಂತರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರು.

ಧರ್ಮಸ್ಥಳದಲ್ಲಿ ಬಹಳಷ್ಟು ಗೊಂದಲ ಸೃಷ್ಟಿಯಾದ ಮೇಲೆ ನಮ್ಮ ರಾಜ್ಯ ಸರ್ಕಾರ ಎಸ್ಐಟಿ ನೇಮಿಸಿದ್ದು. ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತಂದ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ.ಬಿಜೆಪಿಯವರು ಮೊದಲು ಎಸ್ಐಟಿಯನ್ನು ಸ್ವಾಗತಿಸಿ ಈಗ ಯಾಕೆ ಉರಿ ಹತ್ತಿದ ರೀತಿ ಮಾಡುತ್ತಿದ್ದೀರಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಮಾತ್ರ ಹಿಂದುಗಳ, ನಾವು ಹಿಂದುಗಳಲ್ಲವಾ ,ಇವರಿಗೆ ಹಿಂದುತ್ವವನ್ನು ನಾವು ಬರೆದು ಕೊಟ್ಟಿದ್ಧೀವಾ, ಧರ್ಮಸ್ಥಳ ನಿಮ್ಮ ಒಬ್ಬರಿಗೆ ಸೇರಿದ ಹಾಗೆ ಮಾಡುತ್ತಿದ್ದೀರಲ್ಲ, ಆ ಪುಣ್ಯಕ್ಷೇತ್ರ ಸಾರ್ವಜನಿಕರ ಆಸ್ತಿ ಇದನ್ನು ದೊಡ್ಡ ಮಟ್ಟದಲ್ಲಿ ಹಿಂದುತ್ವ ಮಾಡಲು ಹೊರಟಿದ್ದೀರಲ್ಲ ನಿಮ್ಮಗೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದರು.

ಎಸ್ ಐ ಟಿ ತಂದಿರೋದು ಧರ್ಮಸ್ಥಳಕ್ಕೆ ಬಂದ ಕಳಂಕ ತೊಲಗಿಸಲು. ಇದರ ಬಗ್ಗೆ ಬಿಜೆಪಿಯವರು ಗೊಂದಲ ಸೃಷ್ಟಿಸಬಾರದು ಇದು ನಿಮಗೆ ಅಷ್ಟು ಸಮಂಜಸವಾದದ್ದಲ್ಲ ಎಂದು ತಿಳಿಸಿದರು.

ಭಾನು ಮುಸ್ತಾಕ್ ದಸರಾ ಉತ್ಸವದ ಉದ್ಘಾಟನೆ ಮಾಡಲಿರುವುದು ಸಂತೋಷದಾಯಕವಾಗಿದೆ:

ದಸರಾ ರಾಷ್ಟ್ರೀಯ ಹಬ್ಬ ಇದನ್ನು ಜಾತ್ಯಾತೀತವಾಗಿ ಆಚರಣೆ ಮಾಡುತ್ತಾರೆ. ಭಾನು ಮುಸ್ತಾಕ್ ಅವರನ್ನು ದಸರಾ ಉತ್ಸವದ ಉದ್ಘಾಟನೆಯನ್ನು ಮಾಡಲಿರುವುದು ನನಗೆ ಸಂತೋಷದಾಯಕವಾಗಿದೆ. ಇದನ್ನು ಮಹಾರಾಜರು ಸಹ ಒಪ್ಪಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಧರ್ಮ ಮರೆತು ಬೆರೆಯಬೇಕು. ಇದನ್ನು ಬಿಜೆಪಿಯವರು ಗೊಂದಲ ಸೃಷ್ಟಿ ಮಾಡುತ್ತಿರುವುದು ತಪ್ಪು ಇಂಥದ್ದನ್ನೆಲ್ಲ ಬಿಜೆಪಿಯವರು ಬಿಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಉಮೇಶ್, ರೆಹಮತ್ ತುಲ್ಲಾ, ಅಶ್ವಿನ್, ಆಸಿಫ್, ಮಂಜುನಾಥ್ ದಾಸಕೊಪ್ಪ, ರವಿ, ಶಿವಾನಂದ ಹಾಗೂ ಇನ್ನಿತರರು ಇದ್ದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t