ಮನೆ Blog ಕವಿ ವಿ.ಟಿ.ಸ್ವಾಮಿ ಅವರ ಸಾಗರ ಸಂಪಿಗೆ ಕವನ ಸಂಕಲನಕ್ಕೆ“ಕಾವ್ಯ ಸಿರಿ” ರಾಷ್ಟ್ರೀಯ ಪುರಸ್ಕಾರ…

ಕವಿ ವಿ.ಟಿ.ಸ್ವಾಮಿ ಅವರ ಸಾಗರ ಸಂಪಿಗೆ ಕವನ ಸಂಕಲನಕ್ಕೆ“ಕಾವ್ಯ ಸಿರಿ” ರಾಷ್ಟ್ರೀಯ ಪುರಸ್ಕಾರ…

159
0

ಸಾಗರ:

ಕವಿ ವಿ.ಟಿ.ಸ್ವಾಮಿ ಅವರ ಸಾಗರ ಸಂಪಿಗೆ ಕವನ ಸಂಕಲನಕ್ಕೆ 2025 ನೇ ಸಾಲಿನ ರಾಷ್ಟ್ರ ಮಟ್ಟದ “ಕಾವ್ಯ ಸಿರಿ” ಪ್ರಶಸ್ತಿಗೆ ಆಯ್ಕೆಯಾಗಿದೆ.

ಹೈದರಬಾದಿನ ರಾಷ್ಟ್ರೀಯ ಕನ್ನಡ ಸಾಹಿತ್ಯ ಬಳಗ ಪ್ರತಿ ವರ್ಷ ಕನ್ನಡ ಕವನ ಸಂಕಲನಗಳಿಗೆ ರಾಷ್ಟ್ರ ಮಟ್ಟದ ಕಾವ್ಯ ಸಿರಿ ಪ್ರಶಸ್ತಿಯನ್ನು ನೀಡಲಾಗುತ್ತ ಬಂದಿದ್ದು ಈ ವರ್ಷ ಸಾಗರದ ವಿ.ಟಿ.ಸ್ವಾಮಿ ಅವರ ಸಾಗರ ಸಂಪಿಗೆ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪ್ರಸಾದ್ ಅವರು ತಿಳಿಸಿದ್ದಾರೆ.

ಸಾಗರದ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಟಿ.ಸ್ವಾಮಿಯವರು ಕಳೆದ ಹಲವು ದಶಕಗಳ ಕಾಲ ಶೈಕ್ಷಣಿಕ ಸಾಹಿತ್ಯ, ಸಾಂಸ್ಕೃತಿಕ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿರುವ ಇವರು, ಈಗಾಗಲೇ 30 ಕ್ಕೂ ಹೆಚ್ಚಿನ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿರುವ ಇವರು ಸ್ಥಳೀಯ, ಜಿಲ್ಲೆ ,ರಾಜ್ಯ ಮಟ್ಟದ ಅನೇಕ ಪತ್ರಿಕೆಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದ್ದಾರೆ.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ವಿವಿಧ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ಇವರು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದಾರೆ. ಸಾಂಸ್ಕೃತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಹಿತ್ಯ, ಜಾನಪದ ಸಾಹಿತ್ಯದಲ್ಲಿ ಇವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t