
ಆನಂದಪುರ:
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಣ ಹೊಡೆಯುವ ಅವೈಜ್ಞಾನಿಕ ಯೋಜನೆಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ವಿರೋಧಿಸಿದರು.
ಇವರು ಆನಂದಪುರ ಬಸ್ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ,ಜೋಗದಲ್ಲಿ 17 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗಿ ಬೆಂಗಳೂರು ಇನ್ನಿತರ ಕಡೆಗಳಿಗೆ ವಿದ್ಯುತ್ ಕಳಿಸಲು ಆನಂದಪುರ ಮಾರ್ಗವಾಗಿ ನಾಲ್ಕು ದೊಡ್ಡ ಲೈನ್ ಗಳು ಹಾದು ಹೋಗಿವೆ. ಇದರಿಂದ ಅನೇಕ ರೈತರು ತಮ್ಮ ಜಮೀನಿನಲ್ಲಿ ದೀರ್ಘಾವಧಿ ಬೆಳೆಯನ್ನು ಬೆಳೆಯಲಾಗದ ಸ್ಥಿತಿ ಎದುರಾಗಿದೆ.

ಇನ್ನು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ತಂದರೆ ಆನಂದಪುರಂ ಮಾರ್ಗವಾಗಿ ಹಲವಾರು ಲೈನ್ ಹಾದು ಹೋಗುತ್ತದೆ ಇದರಿಂದ ರೈತರ ಬದುಕು ಕತ್ತಲಾಗುವುದು ಖಂಡಿತ ಎಂದರು.
ಈ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಇಂದು ಜಿಲ್ಲಾಧಿಕಾರಿಯವರು ಜನಾಭಿಪ್ರಾಯದ ಸಭೆಯನ್ನು ಕರೆದಿದ್ದಾರೆ ಅಲ್ಲಿ ಮನವಿಯನ್ನು ಸಹ ರೈತರ ಪರವಾಗಿ ನೀಡುತ್ತೇವೆ ಎಂದರು.

ರೈತರಿಗೆ ತೊಂದರೆ ಕೊಡುವ ಹಾಗೂ ಹಣವನ್ನು ಹೊಡೆಯುವ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯಾವ ಕಾರಣಕ್ಕೂ ಸಹ ನಾವು ಬಿಡುವುದಿಲ್ಲ,ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬರ್ಮಪ್ಪ, ಶಾಂತಪ್ಪ ಗೌಡ್ರು, ಧನರಾಜ್, ರೇವಪ್ಪ,ನಟರಾಜ್ ,ನಾಗರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








