ಆನಂದಪುರ:
ಸಮಗಾರ, ಮೋಚಿ ಹಾಗೂ ಚಮ್ಮಾರಿಕೆ ಕೆಲಸ ಮಾಡುವ ನನ್ನ ಸಮುದಾಯದವರು ಈ ಜಾತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಯಾರು ಸಹ ಇದರಿಂದ ಇದರಿಂದ ವಂಚಿತರಾಗಬಾರದು ಎಂದು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹರಳಯ್ಯ ಸಮಗಾರ ಸಮಾಜ ನಾಗರಾಜ್ ಡಿ ಮನವಿ ಮಾಡಿಕೊಂಡರು.
ಇವರು ಇಂದು ಆನಂದಪುರದ ದಾಸಕೊಪ್ಪದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ಜಾತಿ ಗಣತಿಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಗಮೋಹನ್ ದಾಸ್ ರವರ ವರದಿಯ ಪ್ರಕಾರ ಜಾತಿವಾರು ಮೀಸಲಾತಿ ಹಂಚಿಕೆಯಿಂದ ನಮ್ಮ ಜಾತಿಯ ಜನರು ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಲು ಸಹಕಾರಿಯಾಗುತ್ತದೆ ಎಂದು ಒಳ ಮೀಸಲಾತಿಯ ಬಗ್ಗೆ ಪ್ರಶಂಶಿಸಿದರು.
ರಾಜ್ಯ ಸರ್ಕಾರ ಜಯಪ್ರಕಾಶ್ ಹೆಗಡೆ ನೇತೃತ್ವದಲ್ಲಿ ಜಾತಿ ಸಮೀಕ್ಷೆ ಮಾಡಲು ಸಮಿತಿ ಮಾಡಿದೆ. ಈ ಸಮೀಕ್ಷೆ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ರಾಜ್ಯಾದ್ಯಂತ ನಡೆಯಲಿದೆ.
ಈ ಜಾತಿ ಸಮೀಕ್ಷೆಯಲ್ಲಿ ನನ್ನ ಸಮುದಾಯದವರು ಜಾತಿ ಎಂಬ ಕಾಲಂನಲ್ಲಿ ಎಸ್. ಸಿ , ಪರಿಶಿಷ್ಟ ಜಾತಿ ಎಂದು ನಮೂದಿಸಿ ಮತ್ತು ಉಪಜಾತಿ ಎಂಬ ಕಾಲಂನಲ್ಲಿ ಸಮಗಾರ ಅಥವಾ ಮೋಚಿ ಎಂದು ನಮೂದಿಸಲು ಎಂದು ತಮ್ಮ ಸಮುದಾಯದ ಜನರಿಗೆ ಕೋರಿಕೊಂಡರು.

ಬಹಳ ಪ್ರಮುಖವಾಗಿ ನನ್ನ ಜಾತಿಯಿಂದ ಬೇರೊಂದು ಜಾತಿಗೆ ಅಥವಾ ಧರ್ಮಕ್ಕೆ ಮತಾಂತರರಾದವರು , ಮಾತೃ ನೆಲೆಯ ಸೌಲಭ್ಯವನ್ನು ಪಡೆಯಬಾರದು.ಇಂಥವರು ಮತಾಂತರವಾದ ಜಾತಿ ಅಥವಾ ಧರ್ಮದ ಹೆಸರೇ ಸಮೀಕ್ಷೆಯಲ್ಲಿ ನಮೂದಿಸಿ ಎಂದರು.
ರಾಜ್ಯಮಟ್ಟದ ಹರಳಯ್ಯ ಸಮಗಾರ ಸಮಾಜ ಉಪಾಧ್ಯಕ್ಷರು ವಾಸು ಬಿ ಮಾತನಾಡಿ ನನ್ನ ಸಮಾಜ ಬಾಂಧವರು ಸಮಗಾರ ಮತ್ತು ಮೋಜಿ ಎಂದು ಜಾತಿ ಸಮೀಕ್ಷೆಯಲ್ಲಿ ನಮೂದಿಸಿ ನಮ್ಮ ಸಂಖ್ಯೆ ಎಷ್ಟರ ಪ್ರಮಾಣದಲ್ಲಿದೆ ಎಂದು ರಾಜ್ಯ ಸರ್ಕಾರಕ್ಕೆ ತೋರಿಸೋಣ. ಮುದ್ದಿನ ದಿನಗಳಲ್ಲಿ ನಮ್ಮ ಒಗ್ಗಟ್ಟನ್ನು ಪ್ರದೇಶಿಸಿ ಸರ್ಕಾರ ದಿಂದ ಬರುವ ಸವಲತ್ತುಗಳನ್ನೆಲ್ಲ ಪಡೆದುಕೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ರೂಪ ನಾಗರಾಜ್ ,ಸ್ವಾಮಿ ಗುಡುವಿ ಸಮಗಾರ ಸಮಾಜದ ಸದಸ್ಯರು ಆನಂದಪುರ ,ಹರಳಯ್ಯ ಸಮಗಾರ ಸಮಾಜ ಶಿವಮೊಗ್ಗ ಜಿಲ್ಲಾ ಖಜಾಂಚಿ ಗೀತಾ ರವಿಕುಮಾರ್, ಯಶೋದಮ್ಮ ,ರಂಗನಾಥ್, ಶಿವಾನಂದ, ಮಂಜಪ್ಪ, ವಿಜಯ್, ಮಹೇಶ, ಸುರೇಶ, ವಿನಾಯಕ, ದೇವೇಂದ್ರ, ಗಣಪತಿ,ಗೋಪಾಲ ಪಾಲ್ಗೊಂಡಿದ್ದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









