ಆನಂದಪುರ:
ನಿನ್ನೆ ಹಾಗೂ ಇವತ್ತು ಸಾಗರ ನೆಹರು ಕ್ರೀಡಾಂಗಣದಲ್ಲಿ ನಡೆದಂತಹ 17 ವರ್ಷದೊಳಗಿನ ಪ್ರೌಢ ಶಾಲಾ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪಡೆದುಕೊಂಡಿದೆ.
ಸತತವಾಗಿ ನಾಲ್ಕು ವರ್ಷಗಳಿಂದ 17 ವರ್ಷದೊಳಗಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪಡೆಯುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಕ್ರೀಡಾಕೂಟದಲ್ಲಿ ಬಾಲಕಿಯರ ಖೋ ಖೋ ಪ್ರಥಮ,ಬಾಲಕಿಯರ ಕಬಡ್ಡಿ ಪ್ರಥಮ ,ಬಾಲಕರ ಖೋ ಖೋ ದ್ವಿತೀಯ,ಬಾಲಕಿಯರ 4*100mtr ರೀಲೆ ಪ್ರಥಮ ,ಬಾಲಕಿಯರ 4*400mtr ರೀಲೆ ದ್ವಿತೀಯ,ಬೃಂದ K 200 mtr ಓಟ ದ್ವಿತೀಯ,ಅಶ್ವಿನ್ K N 200mtr ಓಟ ದ್ವಿತೀಯ,ಐಶ್ವರ್ಯ 3000 mtr ನಡಿಗೆ ಪ್ರಥಮ,ನಿಶಾಂತ್ 5000mtr ನಡಿಗೆ ಪ್ರಥಮ ,ಸಿಂಧುಶ್ರೀ ಹ್ಯಾಮರ್ ಎಸೆತ ದ್ವಿತೀಯ,ಅರ್ಪಿತಾ ಉದ್ದ ಜಿಗಿತ ತೃತೀಯ,ದೀಪಿಕಾ 400mtr ಓಟ ತೃತೀಯ ಸ್ಥಾನಗಳನ್ನು ಪಡೆದು ವಿದ್ಯಾರ್ಥಿಗಳು ಆನಂದಪುರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಸಮಗ್ರ ಪ್ರಶಸ್ತಿಯನ್ನು ತಂದಿದ್ದಾರೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಇಂತಹ ಸಾಧನೆಯನ್ನು ಮಾಡುವುದಕ್ಕೆ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ನಟರಾಜ್ ರವರ ತರಬೇತಿ ಮತ್ತು ಉಪ ಪ್ರಾಂಶುಪಾಲರಾದ ಈಶ್ವರಪ್ಪನವರ ಸಹಕಾರ ಹೆಚ್ಚಿನದಾಗಿದೆ ಎಂದು ತಿಳಿದು ಬಂದಿದೆ.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗುಂಪನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









