ಮನೆ ಶಿವಮೊಗ್ಗ ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ: ಐ.ಪಿ.ಎಸ್ ಬೆನಕ ಪ್ರಸಾದ್….!!

ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ: ಐ.ಪಿ.ಎಸ್ ಬೆನಕ ಪ್ರಸಾದ್….!!

108
0

ಆನಂದಪುರ:

ಕುಡಿದು ಗಾಡಿ ಚಲಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ಸಾಗರದ ಸಹಾಯಕ ಪೊಲೀಸ್ ಅಧೀಕ್ಷಕರು ಐ.ಪಿ.ಎಸ್ ಬೆನಕ ಪ್ರಸಾದ್ ತಿಳಿಸಿದರು.

ಇವರು ಇಂದು ಆನಂದಪುರ ಪೊಲೀಸ್ ಠಾಣೆ ಯವರು ಹಮ್ಮಿಕೊಂಡಿದ್ದಂತಹ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಕಾರ್ಯಕ್ರಮದ ಜಾತದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಲ್ಲಾ ವಾಹನಸವಾರರು ದಯವಿಟ್ಟು ಸಂಚಾರಿ ನಿಯಮ ಪಾಲಿಸಿ ಇದರಿಂದ ನೀವು ಸುರಕ್ಷತೆಯಿಂದ ಇರುತ್ತೀರಿ ಹಾಗೂ ನಿಮ್ಮ ಕುಟುಂಬದವರು ಸಹ ಸುರಕ್ಷತೆಯಿಂದ ಇರುತ್ತಾರೆ.

ಸಂಚಾರಿ ನಿಯಮ ಉಲ್ಲಂಘಿಸಿ ನೀವು ದಂಡ ಕಟ್ಟುವುದಕ್ಕಿಂತ ಅದೇ ಹಣದಲ್ಲಿ ಹೆಲ್ಮೆಟ್ ಕೊಂಡುಕೊಂಡು ಧರಿಸಿದರೆ ನಿಮ್ಮ ಜೀವವನ್ನು ಉಳಿಸಿಕೊಳ್ಳ ಬಹುದು ಎಂದು ತಿಳಿಸಿದರು.

18 ವರ್ಷದ ಒಳಗಿನ ಮಕ್ಕಳು ವಾಹನವನ್ನು ಚಲಾಯಿಸಬೇಡಿ ಒಂದು ವೇಳೆ ಚಲಾವಣೆ ಮಾಡಿದ್ದು ಕಂಡು ಬಂದರೆ ವಾಹನದ ಮಾಲೀಕರ ಮೇಲೆ ಪ್ರಕರಣ ದಾಖಲಾಗುವುದು ಹಾಗೂ ಜೈಲಿಗೆ ಕಳಿಸಲಾಗುತ್ತದೆ ಮತ್ತು 25 ಸಾವಿರದವರೆಗೆ ದಂಡವನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದರು.

ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಮಾತನಾಡಿ ರಸ್ತೆ ಅಪಘಾತದಲ್ಲಿ ಯುವಕರು ಹೆಚ್ಚಿನದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವರನ್ನು ನಂಬಿದಂತಹ ತಂದೆ ತಾಯಿಗೆ ತುಂಬಲಾರದ ನಷ್ಟವಾಗುತ್ತದೆ. ದಯವಿಟ್ಟು ಎಲ್ಲ ದ್ವಿಚಕ್ರ ವಾಹನ ಸವಾರರು ಸಂಚಾರಿ ನಿಯಮವನ್ನು ಪಾಲಿಸಿ ಹೆಲ್ಮೆಟ್ ಧರಿಸಿ ವಾಹನವನ್ನು ಚಲಾಯಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆನಂದಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t