ಮನೆ ಶಿವಮೊಗ್ಗ ಬೀದಿಗಿಳಿದ ಅರಣ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು– ಬೀದಿ ನಾಟಕ ಮಾಡಿ ತಮ್ಮ ಅಳಲು...

ಬೀದಿಗಿಳಿದ ಅರಣ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು– ಬೀದಿ ನಾಟಕ ಮಾಡಿ ತಮ್ಮ ಅಳಲು ತೋಡಿಕೊಂಡ ವಿದ್ಯಾರ್ಥಿಗಳು..

109
0

ಆನಂದಪುರ:

ಅರಣ್ಯ ಇಲಾಖೆಯಲ್ಲಿರುವ ವಿವಿಧ ಅಧಿಕಾರಿಹುದ್ದೆಗಳಿಗೆ ಬಿಎಸ್ಸಿ ಅರಣ್ಯಶಾಸ್ತ್ರ ಪದವೀಧರರನ್ನು ನೇರ ನೇಮಕಾತಿ ಮಾಡಿ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳು ಇರುವಕ್ಕಿ ವಿಶ್ವವಿದ್ಯಾನಿಲಯದಿಂದ ಮೆರವಣಿಗೆಯ ಮೂಲಕ ಆನಂದಪುರ ಬಸ್ ನಿಲ್ದಾಣದವರೆಗೆ ಕಾಡಿನ ಮಕ್ಕಳು ಬೀದಿಗೆ ಬಿದ್ದರು, ಅರಣ್ಯ ಶಾಸ್ತ್ರ ಓದಿದವರಿಗೆ ಅರಣ್ಯ ಕಾಯುವ ಹಕ್ಕಿಲ್ಲವೇ? ಅರಣ್ಯ ವಿದ್ಯಾರ್ಥಿಗಳ ರೋಧನ ಮುಗಿಯದ ಕಥನ ಎನ್ನುವ ಘೋಷಣೆಗಳನ್ನು ಕೂಗುತ್ತಾ ಆಗಮಿಸಿ ಆನಂದಪುರ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಮಾಡಿದರು.

ಅರಣ್ಯ ಪದವೀಧರ ವಿದ್ಯಾರ್ಥಿಗಳ ವೃತ್ತಿ ಜೀವನದ ಹಿತದೃಷ್ಟಿಯಿಂದ ಮತ್ತು ಭವಿಷ್ಯದ ಹಿತ ದೃಷ್ಟಿಯಿಂದ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಲಯ ಅರಣ್ಯ ಅಧಿಕಾರಿ ಮತ್ತು ಉಪವಲಯ ಅರಣ್ಯ ಅಧಿಕಾರಿ ಹುದ್ದೆಗಳಲ್ಲಿ ಬಿಎಸ್ಸಿ ಅರಣ್ಯ ಶಾಸ್ತ್ರವನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಿ ಬಿಎಸ್ಸಿ ಅರಣ್ಯ ಶಾಸ್ತ್ರ ಪದವೀಧರರಿಗೆ ನ್ಯಾಯ ಒದಗಿಸಿಕೊಡಬೇಕು ಎಂಬ ಮನವಿಯನ್ನ ನಾಡಕಛೇರಿಯ ಉಪತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ನೀಡದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವೃತ್ತಿಪರ ಅರಣ್ಯ ಶಾಸ್ತ್ರ ಮಾರುತಿ ಸಿ ಏನ್ ಪದವೀಧರರ ಸಾಮರ್ಥ್ಯ ಮತ್ತು ಅಗತ್ಯವನ್ನು ಅರಿತುಕೊಂಡು ಕರ್ನಾಟಕ ಸರ್ಕಾರ 2003 ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯ ಅಧಿಕಾರಿ ಹುದ್ದೆಗೆ ಶೇಕಡ 50ರಷ್ಟು ಮೀಸಲಾತಿಯನ್ನು ಒದಗಿಸಿದ ನಂತರ 2012ರಲ್ಲಿ ವಲಯ ಅರಣ್ಯ ಅಧಿಕಾರಿ ಹುದ್ದೆಗೆ ಶೇಕಡ 75 ರಷ್ಟು ಹೆಚ್ಚಿಸಲಾಗಿತ್ತು. ನಾಟಕ ಅರಣ್ಯ ಇಲಾಖೆಯ ಸೇವೆಗಳ ನೇಮಕಾತಿ ತಿದ್ದುಪಡಿ ನಿಯಮಗಳಾಗಿಯಲ್ಲಿ 2018 ರಲ್ಲಿ ಪ್ರಸ್ತಾಪಿಸಲಾದ ಹೊಸ ಕರಡ ನಿಯಮಗಳು ಬಿ ಎಸ್ ಸಿ ಅರಣ್ಯ ಶಾಸ್ತ್ರ ಪದವೀಧರರಿಗೆ ಒಲೆಯ ಅರಣ್ಯ ಅಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಮೊದಲಿದ್ದ ಶೇಕಡ 75 ರ ಮೀಸಲಾತಿಯನ್ನು 50ಕ್ಕೆ ಕಡಿಮೆಗೊಳಿಸಿರುತ್ತಾರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ಸಚಿವರು ಸರ್ಕಾರ ನಮ್ಮ ಬಗ್ಗೆ ಗಮನ ಹರಿಸಿ ಎಂದು ಕೇಳಿಕೊಂಡರು.

ಮೇಲ್ಕಂಡ ಆದೇಶ ವಿರುದ್ಧವಾಗಿಯೂ ಮತ್ತು ಶ್ರೀ ಟಿಎಂ ವಿಜಯ್ ಭಾಸ್ಕರ್ ರವರು ಉಪವಲಯ ಅರಣ್ಯ ಅಧಿಕಾರಿಯ ಹುದ್ದೆಯ ನೇರ ನೇಮಕಾತಿಯನ್ನು ತೆಗೆದು ಶೇಕಡ 100ರಷ್ಟು ಹುದ್ದೆಗಳನ್ನು ಮುಂಬಡ್ತಿ ಹುದ್ದೆಯನ್ನಾಗಿ ಪರಿವರ್ತಿಸಬೇಕೆಂಬುದರ ಕುರಿತಾಗಿ ಸಲ್ಲಿಸಿದ್ದ ಒಂಬತ್ತನೆಯ ಆಡಳಿತ ಸುಧಾರಣೆಯ ವರದಿಯ ಅಧ್ಯಾಯ 4ರ ಆದಿ ಸೂಚನೆ ಸಂಖ್ಯೆ 81 ಈ ಹಿಂದೆ 2024ರಲ್ಲಿ ನಡೆದ ನಮ್ಮ ಪ್ರತಿಭಟನೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರವು ವಿಶೇಷ ಸಮಿತಿಯನ್ನು ರಚಿಸುವುದರ ಮೂಲಕ ನಮ್ಮ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ನೀಡಿತ್ತು ಆದರೆ ಈವರೆಗೂ ರಾಜ್ಯ ಸರ್ಕಾರದಿಂದಾಗಲಿ ಅಥವಾ ರಚಿಸಿದ ಸಮಿತಿಯಿಂದಾಗಲಿ ಯಾವುದೇ ರೀತಿಯ ವರದಿ ಅಥವಾ ಆದಿ ಸೂಚನೆ ಹೊರಬಂದಿರುವುದಿಲ್ಲ ಇದರಿಂದ ಅರಣ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.

ಬಿಎಸ್ಸಿ ಅರಣ್ಯಶಾಸ್ತ್ರ ಪದವೀಧರರನ್ನೆ ನೇರ ನೇಮಕಾತಿ ಮಾಡುವುದರ ಮೂಲಕ ಅರಣ್ಯ ಶಾಸ್ತ್ರದಲ್ಲಿ ವಿಶೇಷ ಪರಿಣಿತಿ ಹೊಂದಿರುವ ಪದವೀಧರ ಜ್ಞಾನ ಮತ್ತು ಅನುಭವವನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ವಿದ್ಯಾರ್ಥಿನಿ ಚೈತನ್ಯ ಆಗ್ರಹಿಸಿದರು.

ಅರಣ್ಯಶಾಸ್ತ್ರವು ಒಂದು ವಿಶೇಷ ಕ್ಷೇತ್ರವಾಗಿದ್ದು ಅರಣ್ಯ ಪರಿಸರ ಶಸ್ತ್ರ ಜೀವ ವೈವಿಧ್ಯ ಸಂರಕ್ಷಣೆ ವೃಕ್ಷಶಾಸ್ತ್ರ ವಿಧಾನಗಳು ವನ್ಯಜೀವಿ ನಿರ್ವಹಣೆ ಅವಮಾನ ಬದಲಾವಣೆ ತಡೆಗೆ ಅರಣ್ಯ ನಿರ್ವಹಣೆ ಅರಣ್ಯ ಸಂಪತ್ತು ಬಳಕೆ ಹಾಗೂ ಸಾಮಾಜಿಕ ಅರಣ್ಯ ನಿರ್ವಹಣೆ ಮುಂತಾದ ವಿವಿಧ ಕರ್ತವ್ಯಗಳನ್ನು ಒಳಗೊಂಡಿದ್ದು ಈ ವಿಭಾಗದ ಚಟಲತೆಯನ್ನು ಸಮರ್ಥವಾಗಿ ನಿರ್ವಹಿಸಲು ನಿರ್ದಿಷ್ಟ ಅರಣ್ಯ ಶಿಕ್ಷಣ ಮತ್ತು ತರಬೇತಿ ಹೊಂದಿರುವ ಅಭ್ಯರ್ಥಿಗಳೇ ಅಗತ್ಯ ಹಾಗಾಗಿ ಬಿಎಸ್ಸಿ ಅರಣ್ಯಶಾಸ್ತ್ರವನ್ನು ಓದುವ ವಿದ್ಯಾರ್ಥಿಗಳು ನೇರ ನೇಮಕಾತಿಗೆ ಅರ್ಹರಿರುತ್ತಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಿಳಿಸಿರುತ್ತಾರೆ.

ಪ್ರತಿಭಟನೆಯಲ್ಲಿ ಅಮರನಾಥ್, ಮಂಜುನಾಥ್.ಲಕ್ಷ್ಮಿ, ಹರ್ಷಿತ ಅಮೃತ ಕುರಿ.ಅನೂಪ್ ಚೌಹಾನ್ ಸಂತೋಷ್ ವಿ ಹಾಗೂ ಅರಣ್ಯ ಶಾಸ್ತ್ರ ಪದವೀಧರ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t