ಶಿವಮೊಗ್ಗ: ನವುಲೆಯ ಕೆಎಸ್‌ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಕರ್ನಾಟಕ ಮತ್ತು ಗೋವಾ ತಂಡಗಳ ಮಧ್ಯೆ ನಾಳೆಯಿಂದ ರಣಜಿ ಪಂದ್ಯಾವಳಿ ನಡೆಯಲಿದೆ. ಅ.28ರವರೆಗೆ ಪಂದ್ಯಾವಳಿ ನಡೆಯಲಿದ್ದು, ಉಭಯ ತಂಡಗಳು ಅಂತಿಮ ಹಂತದ ಸಿದ್ಧತೆ ನಡೆಸಿವೆ.
ರಣಜಿ ಟ್ರೋಫಿ ಎಲೈಟ್ ವಿಭಾಗದ ‘ಬಿ’ ಗುಂಪಿನಲ್ಲಿ ಮಯಂಕ್ ಅಗರ್‌ವಾಲ್ ನಾಯಕತ್ವದ ಕರ್ನಾಟಕ ತಂಡ ಹಾಗೂ ದೀಪರಾಜ್ ಗಾಂವ್ಕರ್ ನೇತೃತ್ವದ ಗೋವಾ ತಂಡಗಳು ಮುಖಾಮುಖಿಯಾಗಲಿವೆ. ಐದು ವರ್ಷದ ಬಳಿಕ ಶಿವಮೊಗ್ಗದಲ್ಲಿ ಮತ್ತೆ ರಣಜಿ ಪಂದ್ಯಾವಳಿ ನಡೆಯುತ್ತಿದೆ. ಅ.25ರಂದು ಬೆಳಿಗ್ಗೆ 8.45ಕ್ಕೆ ಪಂದ್ಯದ ಉದ್ಘಾಟನೆ ಕಾರ್ಯಕ್ರಮ ಸಾಂಕೇತಿಕವಾಗಿ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಡಿ.ಎಸ್.ಅರುಣ್, ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲ ಸೌಕರ್ಯ ಸಮಿತಿ ಸದಸ್ಯ
ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ:
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಎಸ್.ಅರುಣ್, ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶವಿದೆ. ಅಂತರರಾಷ್ಟ್ರೀಯ ಟೂರ್ನಿಗಳ ಅಬ್ಬರದ ನಡುವೆ ರಣಜಿ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿಸಲು ಶಿವಮೊಗ್ಗದಂತಹ 2ನೇ ಹಂತದ ನಗರದಲ್ಲಿ ರಣಜಿ ಪಂದ್ಯಗಳನ್ನು ಬಿಸಿಸಿಐ ಆಯೋಜಿಸಿದೆ. ಇದರಿಂದ ಇಲ್ಲಿನ ಯುವ ಕ್ರೀಡಾಪಟುಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ವಿಶೇಷ ಸ್ಟ್ಯಾಂಡ್ ಕೂಡಾ ವ್ಯವಸ್ಥೆ ಮಾಡಲಾಗಿದೆ.

ವಿಐಪಿ ಹಾಗೂ ವಿವಿಐಪಿ ಸ್ಟ್ಯಾಂಡ್ ಕೂಡಾ ಇದ್ದು, ಅದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು. 5 ವರ್ಷದ ಬಳಿಕ ರಣಜಿ ಪಂದ್ಯಶಿವಮೊಗ್ಗದಲ್ಲಿ 2020ರ ಜನವರಿ 4ರಿಂದ 7ರವರೆಗೆ ಕರ್ನಾಟಕ ಹಾಗೂ ಮಧ್ಯಪ್ರದೇಶ ತಂಡಗಳ ನಡುವೆ ಇದೇ ಮೈದಾನದಲ್ಲಿ ರಣಜಿ ಪಂದ್ಯ ನಡೆದಿತ್ತು. ಐದು ವರ್ಷಗಳ ನಂತರ ಪಂದ್ಯಕ್ಕೆ ನವುಲೆಯ ಕೆಎಸ್‌ಸಿಎ ಮೈದಾನ ಸಾಕ್ಷಿಯಾಗಲಿದೆ ಎಂದರು. ಕೆಎಸ್‌ಸಿಎ ಪ್ರಮುಖರಾದ ಡಿ.ಆರ್.ನಾಗರಾಜ್, ವಲಯಾಧ್ಯಕ್ಷ ರಾಜೇಶ್ ಕಾಮತ್, ಐಡಿಯಲ್ ಗೋಪಿ, ಮನೋಹರ್ ಉಪಸ್ಥಿತರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









