Home Blog ಪ್ರೀತಿಯ ಹೆಸರಲ್ಲಿ ಬ್ಲಾಕ್ ಮೇಲ್, ಯುವತಿ ದುರಂತ ಅಂತ್ಯ, ಡೆತ್ ನೋಟ್ ಅಲ್ಲಿ ಬಯಲಾದ ಅಸಲಿ...

ಪ್ರೀತಿಯ ಹೆಸರಲ್ಲಿ ಬ್ಲಾಕ್ ಮೇಲ್, ಯುವತಿ ದುರಂತ ಅಂತ್ಯ, ಡೆತ್ ನೋಟ್ ಅಲ್ಲಿ ಬಯಲಾದ ಅಸಲಿ ಸತ್ಯ..!!

56
0

ಬೆಂಗಳೂರು:ಪ್ರೀತಿ ಹೆಸರಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಾ ಬ್ಲಾಕ್ ಮೇಲ್ ಮಾಡುತ್ತಿದ್ದ ಸಹಪಾಠಿಯೊಬ್ಬನ ಕಾಟ ತಡೆಯಲಾಗದೆ ಯುವತಿ ಯೋರ್ವಳು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಮೂಲದ ವಾಣಿಶ್ರೀ (೨೨) ಆತ್ಮಹತ್ಯೆಗೆ ಶರಣಾದ ದುರ್ದೈವಿ.ನಿನ್ನೆ ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅಗ್ರ ಕೆರೆಗೆ ಹಾರಿ ಯುವತಿ ತನ್ನ ಜೀವನ ಕೊನೆಗೊಳಿಸಿದ್ದಾಳೆ.

ಉದ್ಯೋಗ ಮಾಡುತ್ತಿದ್ದ ಯುವತಿ:

ಕಾಲೇಜು ದಿನಗಳಲ್ಲಿ ವಾಣಿಶ್ರೀ ಹಾಗೂ ಆರೋಪಿ ಅಭಿಷೇಕ್ ಸ್ನೇಹದಲ್ಲಿದ್ದರೂ. ಸುಮಾರು ಒಂದು ವರ್ಷದ ಹಿಂದೆ ವಾಣಿ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ನಗರದ ಪ್ರಸಿದ್ಧ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದರು.

ಡೆತ್ ನೋಟ್‌ನಲ್ಲಿ ಇತ್ತು ಅಸಲಿ ಕಥೆ:

ಆತ್ಮಹತ್ಯೆಗೂ ಮುನ್ನ ವಾಣಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಸಾವಿಗೆ ಆಲೂರು ಸ್ವಾಮಿ ಅವರ ಪುತ್ರ ಅಭಿಷೇಕ್ ಎಂಬಾತನೇ ನೇರ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಕಾಲೇಜು ದಿನಗಳ ಪರಿಚಯವನ್ನು ಇಟ್ಟುಕೊಂಡು ಅಭಿಷೇಕ್, ಯುವತಿಯ ವಾಟ್ಸಾಪ್‌ಗೆ ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.

ರೂಮಿಗೆ ಬಾ ಎಂದು ವಿಕೃತವಾಗಿ ಪೀಡಿಸುತ್ತಿದ್ದ ಎಂದು ಯುವತಿ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.

ನಮ್ಮ ಕುಟುಂಬದ ಮರ್ಯಾದೆ ಹೋಗುತ್ತದೆ..”

:ಅಭಿಷೇಕ್ ನೀಡುತ್ತಿದ್ದ ಮಾನಸಿಕ ಹಿಂಸೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಷಯ ಹೊರಬಂದರೆ ತನ್ನ ಕುಟುಂಬದ ಮರ್ಯಾದೆ ಹರಾಜಾಗುತ್ತದೆ ಎಂಬ ಭೀತಿಯಿಂದ ಯುವತಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. “ನನ್ನ ಸಾವಿಗೆ ಕಾರಣನಾದ ಅಭಿಷೇಕ್‌ಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಡೆತ್ ನೋಟ್‌ನಲ್ಲಿ ಯುವತಿ ಆಕ್ರೋಶ ಹೊರಹಾಕಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಯುವತಿಯ ಮೃತದೇಹವನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಲಭ್ಯವಿರುವ ಡೆತ್ ನೋಟ್ ಹಾಗೂ ಮೊಬೈಲ್ ಚಾಟ್‌ಗಳ ಆಧಾರದ ಮೇಲೆ ತಲೆಮರೆಸಿಕೊಂಡಿರುವ ಆರೋಪಿ ಅಭಿಷೇಕ್ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.