ಮನೆ Blog ಆನಂದಪುರ: ರಾಷ್ಟ್ರೀಯ ಹೆದ್ದಾರಿ ಪಕ್ಕದ ದೈತ್ಯ ಮರ ಅಪಾಯಕ್ಕೆ ಆಹ್ವಾನ; ಕೆ.ಪಿ.ಎಸ್ ಶಾಲಾ ಮಕ್ಕಳಲ್ಲಿ ಆತಂಕ..!!

ಆನಂದಪುರ: ರಾಷ್ಟ್ರೀಯ ಹೆದ್ದಾರಿ ಪಕ್ಕದ ದೈತ್ಯ ಮರ ಅಪಾಯಕ್ಕೆ ಆಹ್ವಾನ; ಕೆ.ಪಿ.ಎಸ್ ಶಾಲಾ ಮಕ್ಕಳಲ್ಲಿ ಆತಂಕ..!!

32
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;

✒️..ಅಮಿತ್ ಆರ್ ಆನಂದಪುರ

​ಆನಂದಪುರ (ಸಾಗರ): ಇಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಮುಂಭಾಗದ ಬೃಹತ್ ಮಾವಿನ ಮರವೊಂದು ಯಾವುದೇ ಕ್ಷಣದಲ್ಲೂ ಉರುಳುವ ಸ್ಥಿತಿಯಲ್ಲಿದ್ದು, ವಾಹನ ಸವಾರರು ಹಾಗೂ ಶಾಲಾ ವಿದ್ಯಾರ್ಥಿಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.

​ಕಳೆದ ಕೆಲವು ದಿನಗಳ ಹಿಂದೆ ಮರದ ಬೃಹತ್ ರೆಂಬೆಯೊಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಮುರಿದು ಬಿದ್ದಿದೆ. ಈ ಹೆದ್ದಾರಿಯಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿರುತ್ತವೆ ಹಾಗೂ ಶಾಲಾ ವಿದ್ಯಾರ್ಥಿಗಳು ಇದೇ ಹಾದಿಯಲ್ಲಿ ಓಡಾಡುವುದರಿಂದ, ಅಪಾಯ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.

ಮುಂದೆ ಬರುವ ಮಳೆಗಾಲದಲ್ಲಿ ವಿಪರೀತ ಗಾಳಿ ಮಳೆಗೆ ಮರ ಉರುಳಿ ಬೀಳುವ ಹೆಚ್ಚಿನ ಸಾಧ್ಯತೆ ಇದೆ.

ಸ್ಥಳೀಯರ ಆಕ್ರೋಶ:


“ಈ ಮರವು ಬಹಳ ಹಳೆಯದಾಗಿದ್ದು, ಮಳೆಯ ಆರ್ಭಟಕ್ಕೆ ಮುರಿದು ಬೀಳುವ ಹಂತದಲ್ಲಿದೆ. ಒಂದು ದೊಡ್ಡ ರೆಂಬೆ ಈಗಾಗಲೇ ಬಿದ್ದಿದೆ. ಅಧಿಕಾರಿಗಳು ಅನಾಹುತ ಸಂಭವಿಸುವವರೆಗೂ ಕಾಯದೆ, ತಕ್ಷಣವೇ ಮರವನ್ನು ತೆರವುಗೊಳಿಸಬೇಕು,” ಎಂದು ಸ್ಥಳೀಯ ಸಾರ್ವಜನಿಕರು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.

​ಸಂಬಂಧಪಟ್ಟ ಇಲಾಖೆಯವರು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ ಇಲ್ಲವಾದರೆ ಮುಂದೆ ಆಗುವ ಅನಾಹುತಗಳಿಗೆ ನಾಂದಿ ಹಾಡಿದಂತಾಗುತ್ತದೆ.

ಈ ಕುರಿತು ವಲಯ ಅರಣ್ಯ ಅಧಿಕಾರಿ ಹೇಳಿದ್ದೇನು..?

ಈ ಕುರಿತು ನಮ್ಮ ಅಮಿತ್ ಟೈಮ್ಸ್ ನ್ಯೂಸ್ ಚಾನೆಲ್ ಗೆ ಪ್ರತಿಕ್ರಿಯಿಸಿದ ಚೋರಡಿ ವಲಯ ಅರಣ್ಯಾಧಿಕಾರಿ (RFO) ಗೀತಾ ಇದು ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ ಆದಷ್ಟು ಬೇಗನೆ ಮರವನ್ನು ತೆರವುಗೊಳಿಸುವ ಕೆಲಸ ಮಾಡುತ್ತೇವೆ ಎಂದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t