ಶಿವಮೊಗ್ಗ,ಮೇ.19: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಶಿವಪ್ಪ ನಾಯಕ ಪ್ರತಿಮೆ ಬಳಿ ಉತ್ತರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.
ಖಾಲಿ ಸಿಲಿಂಡರ್ ಪ್ರದರ್ಶನ ಮಾಡುವ ಮೂಲಕ ಮತ್ತು ವೈದ್ಯರಾಗುವ ಕನಸು ನುಚ್ಚುನೂರಾಗಿದ್ದರ ಸಂಕೇತವಾಗಿ ಸ್ಪೆತಸ್ಕೋಪ್ ಪ್ರದರ್ಶನ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆ ಉದ್ದೇ ಶಿಸಿ ಮಾತಾನಾಡಿದ ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಎನ್. ರಮೇಶ್ ಪ್ರಶ್ನೆ ಪತ್ರಿಕೆ ಸೋರಿಕೆ ಇದು ಮೊದಲ ಬಾರಿಯಲ್ಲ. ಸರ್ಕಾರ ತನಿಖೆ ಮಾಡುತ್ತೇವೆ ಎನ್ನುತ್ತಾರೆ, ಆದರೆ ಈ ವರೆಗೆ ಸೋರಿಕೆ ಮಾಡಿದ ಯಾವೊಬನ್ನಿಗೂ ಶಿಕ್ಷೆ ಆಗಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸರ್ಕಾರದ ಜೊತೆಗೆ ಇರುವವರು, ಕೋಚಿಂಗ್ ಸೆಂಟರ್‌ಗಳು ಕಾರಣ. ಸೋರಿಕೆ ಬಗ್ಗೆ ಕೇಂದ್ರ ಸರ್ಕಾರ, ಶಿಕ್ಷಣ ಸಚಿವರು ಸಮರ್ಪಕವಾಗಿ ಉತ್ತರಿಸುತ್ತಿಲ್ಲ. ಪರಿಣಾಮ ಲಕ್ಷಾಂತರ ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಯುವ ಮುಖಂಡ ಹೆಚ್.ಸಿ.ಯೋಗೀಶ್ ಮಾತಾನಾಡಿ, ಇಂಧನ ಬೆಲೆ ಏರಿಸುವ ಮೂಲಕ ಕೇಂದ್ರ ಬಡವರನ್ನು ಸಂಕಷ್ಟಕ್ಕೆ ದೂಡಿದೆ ಸಂಸದ ರಾಘವೇಂದ್ರ ಅವರು ಶ್ರವಣ ಕುಮಾರನಂತೆ ಅಪ್ಪನ ಮೆರವಣಿ ಗೆ ಯಲ್ಲಿ ನಿರತರಾಗಿದ್ದಾರೆ.
ಸಮಸ್ಯೆಗಳು ಅವರಿಗೆ ಕಾಣುತ್ತಿಲ್ಲ, ನೀಟ್ ಪರೀಕ್ಷೆ ಬರೆದವರಲ್ಲಿ ಶೇ.80 ರಷ್ಟು ಹಿಂದೂ ವಿದ್ಯಾರ್ಥಿಗಳಗಳೇ ಇದ್ದಾರೆ ಇದು ಹಿಂದೂ ಮಕ್ಕಳಿಗೆ ಮಾಡಿದ ದ್ರೋಹ ಅಲ್ಲವೇ ಎಂದು ಪ್ರಶ್ನೆ ಮಾಡಿದರು.
ಉತ್ತರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶಿವ ಕುಮಾರ್ ಮಾತಾನಾಡಿ, ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ, ಮಾಜಿ ಪಾಲಿಕೆ ಸದಸ್ಯ ರಾದ ನಾಗರಾಜ್ ಕಂಕಾರಿ, ಪಾಲಕ್ಷಿ, ಯುಮು ನಾ ರಂಗೇಗೌಡ, ಭೋವಿ ನಿಗಮದ ಮಾಜಿ ಅದ್ಯಕ್ಷ ಎಸ್. ರವಿಕುಮಾರ್ ಪ್ರಮುಖರಾದ, ದಿನೇಶ್ ಪಟೇಲ್, ಸುವರ್ಣ ನಾಗರಾಜ್, ಸ್ಟೇಲ್ಲಾ ಮಾರ್ಟಿನ್, ರೇಷ್ಮಾ, ಚಿನ್ನಪ್ಪ, ರಂಗೇಗೌಡ, ಶ್ಯಾಮ್ ಸುಂದರ್ ಸೇರಿದಂತೆ ಹಲವರಿದ್ದರು.













