ಆನಂದಪುರ:
ವಿದ್ಯಾರ್ಥಿಗಳು ಫೋನ್ ಹಾಗೂ ಟಿವಿ ಮಾಧ್ಯಮಗಳಿಂದ ದೂರ ಉಳಿದು ಶ್ರಮವಹಿಸಿ ಓದಿದರೆ ಸಾಧನೆ ಎಂಬ ಶಿಖರವನ್ನು ಏರಬಹುದು ಎಂದು ಸಾಮಾಜಿಕ ಕಾರ್ಯಕರ್ತರಾದ ಎಲ್.ಐ.ಸಿ , ಡಿ. ಎನ್ ರವಿ ಕುಮಾರ್ ತಿಳಿಸಿದರು.

ದಾಸಕೊಪ್ಪದ 50 ನೇ ವರ್ಷದ ಗಣಪತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಊರಿನ ಪ್ರತಿಭಾವಂತ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಮಾತನಾಡಿದರು.
ಯಾವ ವಿದ್ಯಾರ್ಥಿಗಳು ಸಹ ಶಿಕ್ಷಣದಿಂದ ವಂಚಿರಾಗಬೇಡಿ, ಅಂಬೇಡ್ಕರ್ ಹೇಳುವಂತೆ ಶಿಕ್ಷಣ ಹುಲಿ ಹಾಲಿದ್ದಂತೆ, ಅದನ್ನು ಕುಡಿದವರು ಸದಾ ಘರ್ಜಿಸುತ್ತಾ ಇರುತ್ತಾರೆ ಅಷ್ಟು ಶಿಕ್ಷಣಕ್ಕೆ ಮಹತ್ವವಿದೆ.ಗುಡಿಸಿಲಿನಲ್ಲಿ ಹುಟ್ಟಿದ ಬಡವನ ಮಕ್ಕಳು ಸಹ ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಗೌರವವನ್ನು ಈ ಸಮಾಜದಲ್ಲಿ ಪಡೆಯಬಹುದು.

ನಮ್ಮೂರಿನ ವಿದ್ಯಾರ್ಥಿಗಳು ಏನಾದರೂ ಸಹಾಯ ಬೇಕಾದರೆ ಕೇಳಿ ಪೂರ್ಣ ಪ್ರಮಾಣದಲ್ಲಿ ನಿಮಗೆ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.ಮುಂದಿನ ವರ್ಷದ ಗಣಪತಿ ಹಬ್ಬದ ಸಮಯದಲ್ಲಿ ನಮ್ಮೂರಿನ ಪ್ರತಿಭಾವಂತ ಹಾಗೂ ಇತರ ಕ್ಷೇತ್ರದ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತೇನೆ ಎಂದರು.
ಗಣಪತಿ ಸಂಘದ ಗೌರವ ಅಧ್ಯಕ್ಷರಾದ ನಾಗರಾಜ್ ಮಾತನಾಡಿ ನನ್ನ ಜನಾಂಗದವರಿಗೆ, ವರ್ಗದವರಿಗೆ ಮತ್ತು ಸಮಾಜದವರಿಗೆ ಈ ದೇಶದಲ್ಲಿ ಸರಿಯಾದ ಸ್ಥಾನಮಾನ ದೊರಕಿದೆ ಎಂದರೆ ಅದು ಅಂಬೇಡ್ಕರ್ ಕೊಟ್ಟ ಸಂವಿಧಾನದ ಫಲದಿಂದ. ನಾವು ಶಿಕ್ಷಣ ಸಂಘಟನೆ ಮತ್ತು ಹೋರಾಟ ಎಂಬ ಮೂರು ಸೂತ್ರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಮಾತನಾಡಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಆದರೆ ಶಾಂತಿ ಮತ್ತು ವ್ಯವಸ್ಥೆಗೆ ದಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಂ.ಪಂ. ಉಪಾಧ್ಯಕ್ಷರಾದ ರೂಪ ನಾಗರಾಜ್, ಗಣಪತಿ ಸಂಘದ ಅಧ್ಯಕ್ಷರಾದ ನವೀನ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಅಕ್ಷಯ್, ಜೈ ಭೀಮ್ ಸಂಘದ ಅಧ್ಯಕ್ಷರಾದ ವಿಕಾಸ್, ವಾಸು , ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು.

ವಿಶೇಷವಾಗಿ ವೇದಿಕೆಯಲ್ಲಿ ಸಿ.ಆರ್.ಪಿ.ಎಫ್ ಯೋಧನಾದ ರಾಕೇಶ್ ಗೆ ಗಣ್ಯರು ಸನ್ಮಾನಿಸಿದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









