ಮನೆ Blog ವಿ.ಟಿ.ಸ್ವಾಮಿ,ಸಾಗರ ಇವರಿಗೆ”ವಿಜಯಶ್ರೀ ಪುರಸ್ಕಾರ”..!!

ವಿ.ಟಿ.ಸ್ವಾಮಿ,ಸಾಗರ ಇವರಿಗೆ”ವಿಜಯಶ್ರೀ ಪುರಸ್ಕಾರ”..!!

33
0

✒️..ಅಮಿತ್ ಆರ್ ಆನಂದಪುರ


ವಿ.ಟಿ.ಸ್ವಾಮಿ ಸಾಗರ ಇವರಿಗೆ ಬೆಂಗಳೂರು ಜಿಲ್ಲೆಯ ಯಲಹಂಕ ತಾಲೂಕಿನ ಬಾಗಲೂರಿನ ವಿಜಯ ಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆ(ವಿಜೆಇಂಟರ್ನ್ಯಾಷನಲ್ ಸ್ಕೂಲ್) ಇವರು “ವಿಜಯಶ್ರೀ ಪುರಸ್ಕಾರ-2026” ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಏಪ್ರಿಲ್ 4 ರಂದು ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆ ವತಿಯಿಂದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಶ್ರೀರಾಮಚಂದ್ರ ಅವರು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಶಿವಚಿತ್ತಪ್ಪ, ಶಿಕ್ಷಣ ತಜ್ಞರಾದ ಡಾ.ಕೆ.ನಾರಾಯಣಗೌಡ, ಬಾಗಲೂರು ಗ್ರಾಪಂ ಅಧ್ಯಕ್ಷರಾದ ಕೆಂಪೇಗೌಡ, ಸಂಸ್ಥೆಯ ಅಧ್ಯಕ್ಷರಾದ ಡಾ.ಚಿಕ್ಕಹನುಮಂತೇಗೌಡ, ಪ್ರಾಂಶುಪಾಲರಾದ ಎಸ್.ಮಧುಕುಮಾರ್ ಉಪಸ್ಥಿತರಿದ್ದರು.

ಕಳೆದ 35 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದು, ಶೈಕ್ಷಣಿಕವಾಗಿ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ.
ಕನ್ನಡದಲ್ಲಿ ಎಂ.ಎ, ಪತ್ರಿಕೋದ್ಯಮದಲ್ಲಿ ಪಿ.ಜಿ.ಡಿಪೊಲಮೋ ಇನ್ ಜರ್ನಲಿಸಂ ಹಾಗೂ ಎಂ.ಎ.ಎಂ.ಸಿ.ಜೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ವಿಶೇಷವಾಗಿ ಪ್ರಾಕೃತ ಭಾಷೆಯಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಬಿಡುವಿನ ವೇಳೆಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು 35ಕ್ಕೂ ಹೆಚ್ಚಿನ ಸಾಹಿತ್ಯ ಕೃತಿಗಳು ಪ್ರಕಟವಾಗಿವೆ, 20ಕ್ಕೂ ಹೆಚ್ಚು ಸ್ಮರಣ ಸಂಚಿಕೆ ಕೃತಿಗಳನ್ನು ಸಂಪಾದಿಸಿದ್ದಾರೆ, ತಾಲೂಕು ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ನೂರಾರು ಬರಹಗಳನ್ನು ಪ್ರಕಟಿಸಲಾಗಿದೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಶಾಖೆಯ ಅಧ್ಯಕ್ಷರಾಗಿ ಮೂರು ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಸಮ್ಮೇಳನ, ಉತ್ಸವಗಳ ಸಂಘಟನೆ, ಮಕ್ಕಳ ಸಾಹಿತ್ಯ ಸಮ್ಮೇಳನಗಳು, ಶಿಬಿರಗಳು, ಕಾರ್ಯಗಾರಗಳು, ಸಂವಾದ, ಉಪನ್ಯಾಸ ಮೊದಲಾದ ಚಟುವಟಿಕೆಗಳನ್ನು ಆಯೋಜನೆ ಮಾಡುವ ಮೂಲಕ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದ್ದಾರೆ, ರಾಜ್ಯದ ಉದ್ದಗಲಕ್ಕೂ ಅನೇಕ ಕಾರ್ಯಕ್ರಮಗಳಲ್ಲಿ ಉಪನ್ಯಾಸ ಹಾಗೂ ಸಾಹಿತ್ಯ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮಾತನಾಡಿದ್ದಾರೆ.

ನೂರಾರು ಮಕ್ಕಳಿಗೆ ಶಿಕ್ಷಣ ಸಾಹಿತ್ಯ ಸಾಂಸ್ಕೃತಿಕವಾಗಿ ಮಾರ್ಗದರ್ಶನ ಮಾಡಿದ್ದಾರೆ.ತಾಲೂಕು ಆಡಳಿತದ ಅನೇಕ ಕಾರ್ಯಕ್ರಮಗಳನ್ನು, ಜಯಂತಿ, ಉತ್ಸವ, ಮೊದಲಾದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು, ಶಿಕ್ಷಣ ಇಲಾಖೆಯಲ್ಲಿ ಕಳೆದ 38 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಇವರು ಶೈಕ್ಷಣಿಕವಾಗಿ ಸಾಕಷ್ಟು ಚಟುವಟಿಕೆಗಳನ್ನು ಹಾಗೂ ಕಾರ್ಯಕ್ರಮವನ್ನು, ತರಬೇತಿ,ಕಾರ್ಯಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.

ಸಾಗರ ತಾಲ್ಲೂಕಿನಲ್ಲಿ ಶೈಕ್ಷಣಿಕ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಹಾಗಾಗಿ ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸುದೀರ್ಘ ಸೇವೆಯನ್ನು ಗುರುತಿಸಿದ ವಿಜಯ ಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆ ಇವರಿಗೆ ರಾಜ್ಯ ಮಟ್ಟದ “ವಿಜಯಶ್ರೀ ಪುರಸ್ಕಾರ” ನೀಡಿ ಗೌರವಿಸಲಾಗಿದೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t