Home Shivamogga Sagara ಸಾಗರ/ ಭಾರತೀಯ ಸೇನೆ ಸೇರ ಬಯಸುವವರಿಗೆ ಉಚಿತ ತರಬೇತಿ ಶಿಬಿರ..!!

ಸಾಗರ/ ಭಾರತೀಯ ಸೇನೆ ಸೇರ ಬಯಸುವವರಿಗೆ ಉಚಿತ ತರಬೇತಿ ಶಿಬಿರ..!!

54
0

✒️..ಅಮಿತ್ ಆರ್ ಆನಂದಪುರ

ಸಾಗರ : ಮೇ 13ರಿಂದ ಮೇ 28ರವರೆಗೆ ಭಾರತೀಯ ಸೈನ್ಯದಲ್ಲಿ, ಅಗ್ನಿವೀರ್‌ನಲ್ಲಿ ಸೇವೆ ಸಲ್ಲಿಸಲು ಬಯಸುವವರಿಗೆ ಉಚಿತ ತರಬೇತಿ ಮತ್ತು ಮಾಹಿತಿ ಶಿಬಿರ ಏರ್ಪಡಿಸಲಾಗಿದೆ ಎಂದು ಮಲೆನಾಡು ಸೋಲ್ಜರ್ ಸಂಸ್ಥೆ ಅಧ್ಯಕ್ಷ ಕಿಶೋರ್ ಭೈರಾಪುರ ತಿಳಿಸಿದರು.

ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಶ್ರೀಕ್ಷೇತ್ರ ಸಿಗಂದೂರು ದೇವಸ್ಥಾನದ ಆವರಣದಲ್ಲಿ ಮಲೆನಾಡು ಸೋಲ್ಜರ್ ಸಂಸ್ಥೆ ಮತ್ತು ಸಿಗಂದೂರೇಶ್ವರಿ ಟ್ರಸ್ಟ್ ವತಿಯಿಂದ ಉಚಿತವಾಗಿ ಊಟವಸತಿ ಸಹಿತ ಉಚಿತ ತರಬೇತಿ ನೀಡಲಾಗುತ್ತದೆ ಎಂದರು.

ಈಗಾಗಲೆ ಭಾರತೀಯ ಸೈನ್ಯವಾದ ಆರ್ಮಿ, ಏರ್‌ಫೋರ್ಸ್, ನೇವಿಯಲ್ಲಿ ಸೈನಿಕ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನಿಸಿದ್ದು ಜೂನ್ 1ರಿಂದ ಲಿಖಿತ ಹಾಗೂ ದೈಹಿಕ ಕ್ಷಮತೆ ಪರೀಕ್ಷೆ ನಡೆಯಲಿದೆ. ಸೈನ್ಯಕ್ಕೆ ಸೇರಲು ಆಸಕ್ತಿ ಇರುವ ಮಕ್ಕಳಿಗೆ ಪೂರ್ವ ತರಬೇತಿ ಹೇಗಿರುತ್ತದೆ. ಯಾವ ರೀತಿ ದೈಹಿಕ, ಲಿಖಿತ ಪರೀಕ್ಷೆ ಎದುರಿಸಬೇಕು ಎನ್ನುವ ಮಾಹಿತಿ ಇರುವುದಿಲ್ಲ. ಇದರಿಂದ ರಾಜ್ಯದ ಬೇರೆಬೇರೆ ಭಾಗಗಳಲ್ಲಿ ನಡೆಯುವ ಸೈನಿಕ ಸೇರ್ಪಡೆ ಪರೀಕ್ಷೆಗೆ ಹೋಗಿ ವಿಫಲರಾಗಿ ವಾಪಾಸ್ ಬರುತ್ತಿದ್ದಾರೆ.

ನಮ್ಮ ಭಾಗದ ಮಕ್ಕಳು ವೈಫಲ್ಯ ಅನುಭವಿಸಬಾರದು ಎನ್ನುವ ಉದ್ದೇಶದಿಂದ 15 ದಿನ ಉಚಿತವಾಗಿ ತರಬೇತಿ ನೀಡಲಾಗುತ್ತದೆ.

ಹದಿನೈದು ದಿನಗಳ ಶಿಬಿರದಲ್ಲಿ ಸೈನ್ಯಕ್ಕೆ ಸೇರುವ ಆಯ್ಕೆ ಪ್ರಕ್ರಿಯೆಯಲ್ಲಿ ಇರಬೇಕಾದ ದೈಹಿಕ ಸಾಮರ್ಥ್ಯ, ಲಿಖಿತ ಪರೀಕ್ಷೆ ಎದುರಿಸುವುದು ಹೇಗೆ, ಯಾವ ರೀತಿಯ ದಾಖಲೆಗಳನ್ನು ಒದಗಿಸಬೇಕು ಎಂಬ ಇತ್ಯಾದಿ ಅಗತ್ಯ ವಿವರಗಳನ್ನು ನೀಡಲಾಗುತ್ತದೆ.

ಹಾಲಿ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವವರು, ನಿವೃತ್ತ ಯೋಧರು, ಸೈನಿಕ ನೇಮಕಾತಿಯ ಅಧಿಕಾರಿಗಳಿಂದ ತರಬೇತಿ ಕೊಡಿಸಲಾಗುತ್ತದೆ. ಶಿಬಿರದಲ್ಲಿ ಮಾಲ್ಗೊಳ್ಳುವವರು 7019776749, 9448954052 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಈ ಹಿಂದೆ ನಮ್ಮ ಸಂಸ್ಥೆ ಆಶ್ರಯದಲ್ಲಿ ಮುರುಘಾಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆಸಿದ ಸೈನಿಕ ತರಬೇತಿ ಕಾರ್ಯಕ್ರಮದಲ್ಲಿ 26ಕ್ಕೂ ಹೆಚ್ಚು ಯುವಕರು ಸೈನ್ಯದ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ನೇತಾಜಿ ಸುಭಾಷ್‌ ಚಂದ್ರಬೋಸ್ ಯುವ ಟ್ರಸ್ಟ್ ಅಧ್ಯಕ್ಷ ಸುಭಾಷ್ ಕೌತಳ್ಳಿ ಹಾಜರಿದ್ದರು.