Home Shivamogga ಸಿಗಂದೂರು ಸೇತುವೆ ಬಳಿ ಈಜಲು ಹೋಗಿ ಓರ್ವ ಸಾವು..!!

ಸಿಗಂದೂರು ಸೇತುವೆ ಬಳಿ ಈಜಲು ಹೋಗಿ ಓರ್ವ ಸಾವು..!!

29
0

✒️..ಅಮಿತ್ ಆರ್ ಆನಂದಪುರ

ಸಾಗರ ಮೇ 27: (ಶಿವಮೊಗ್ಗ)ಸಾಗರದ ಸಮೀಪದ ಸಿಗಂದೂರು ಸೇತುವೆ ಹೊಳೆಬಾಗಿಲು ಭಾಗದಲ್ಲಿ ಬುಧವಾರ ಮಧ್ಯಾಹ್ನ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಓರ್ವ ಮೃತಪಟ್ಟಿದ್ದಾರೆ.

ಈತ ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಗಲಗಲಿ ಗ್ರಾಮದ ಉಮೇಶ್ (35) ಎಂದು ಗುರುತಿಸಲಾಗಿದೆ.

ಸಿಗಂದೂರು ಚೌಡೇಶ್ವರಿ ದೇವಿ ದರ್ಶನ ಮುಗಿಸಿ, ಸೇತುವೆ ವೀಕ್ಷಣೆಯ ಬಳಿಕ ಸೇತುವೆ ಕೆಳಭಾಗದಲ್ಲಿ ಈಜಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ, ಕಾರ್ಗಲ್ ಪೊಲೀಸ್ ಠಾಣೆ ಸಿಬ್ಬಂದಿ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹ ಪತ್ತೆಹಚ್ಚಲಾಯಿತು.ಈ ಸಂಬಂಧ ಕಾರ್ಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.