ಲೇಖಕ:ಡಾ. ಜಗದೀಶ್ ಬಿದರಕೊಪ್ಪ
ಭಾರತದ ಸಂವಿಧಾನದ ಆಶಯದಂತೆ ಸಮಾನತೆ ತತ್ವದ ಅಡಿಯಲ್ಲಿ ಎಲ್ಲರಿಗೂ ಉನ್ನತ ಶಿಕ್ಷಣ ಎಂಬ ಕರ್ನಾಟಕ ಸರ್ಕಾರದ ಗುರಿಯಂತೆ ಪ್ರಮುಖವಾಗಿ ಪಿಯುಸಿ ಓದಿದ ನಂತರ ಕಡಿಮೆ ಪ್ರವೇಶಾತಿ, ಶುಲ್ಕವನ್ನು ಹೊಂದಿ, ಅತ್ಯಂತ ಗುಣಮಟ್ಟ ಶಿಕ್ಷಣವನ್ನು ನೀಡಲು ಸದಾ ಸಿದ್ಧವಾಗಿರುವ ನಮ್ಮ ನಿಮ್ಮ ಹೆಮ್ಮೆಯ ಭವಿಷ್ಯದ ಉತ್ತಮ ದೃಷ್ಟಿಕೋನವನ್ನು ಹೊಂದಿರುವ ಕಾಲೇಜು ಇದಾಗಿದೆ.
ದುಬಾರಿ ಶುಲ್ಕವನ್ನು ನೀಡಿ ಉನ್ನತ ಶಿಕ್ಷಣವನ್ನು ಪಡೆಯಲಾಗದ ಆರ್ಥಿಕವಾಗಿ ಹಿಂದುಳಿದ. ಎಷ್ಟೋ ಕುಟುಂಬಗಳ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಗಗನಕುಸುಮವಾಗಿದೆ. ಜಾಗತೀಕರಣ ಸಂದರ್ಭದಲ್ಲಿ ಶೈಕ್ಷಣಿಕ ಪೈಪೋಟಿಯ ನಡುವೆ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೂ ಸಹ ಕಡಿಮೆ ದರದಲ್ಲಿ ಕರ್ನಾಟಕ ಸರ್ಕಾರ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ. 2014-15 ನೇ ಸಾಲಿನಲ್ಲಿ ಸ್ಥಾಪನೆಗೊಂಡ ಈ ಕಾಲೇಜು ನೂರಾರು ಹೆಣ್ಣು ಮಕ್ಕಳಿಗೆ ಉನ್ನತ ಪದವೀಧರನ್ನಾಗಿ ರೂಪಿಸಿ. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ.
ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು ಸರ್ಕಾರಿ, ಅರೆ ಸರ್ಕಾರಿ ಖಾಸಗಿ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಮುಖವಾಗಿ ನಮ್ಮ ಕಾಲೇಜು ಶೈಕ್ಷಣಿಕವಾಗಿ ಉತ್ತಮ ಪ್ರಗತಿಯನ್ನು ಕಂಡಿದೆ. ಹಾಗೆಯೇ
ವಿಶ್ವವಿದ್ಯಾಲಯ ಮಟ್ಟದ ರಾಂಕ್ ಹೊಂದುವ ಅವಕಾಶ ಈ ಕಾಲೇಜಿನ ವಿದ್ಯಾರ್ಥಿನಿಯರಿಗೆ ಇರುತ್ತದೆ.

ಅತ್ಯುತ್ತಮ ಬೋಧಕ ವೃಂದವನ್ನು ಹೊಂದಿರುವ ಕಾಲೇಜು, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಈಗಾಗಲೇ. ಶೇಕಡವಾರು ಉತ್ತಮ ಫಲಿತಾಂಶದೊಂದಿಗೆ ವಿದ್ಯಾರ್ಥಿನಿಯರು ಅಗ್ರಸ್ಥಾನದಲ್ಲಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲೂ . ಕ್ರೀಡೆ ,ಸಂಸ್ಕೃತಿಕ ಇತರೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿಯರು ರಾಜ್ಯ, ವಿಶ್ವವಿದ್ಯಾಲಯ ಮಟ್ಟದ ಹಲವಾರು ಬಹುಮಾನಗಳನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಹಾಗೆಯೇ ಸರ್ಕಾರ ಮತ್ತು ಇಲಾಖೆಯು ಕಾಲಕಾಲಕ್ಕೆ ಉತ್ತಮ ಸೌಲಭ್ಯವನ್ನು ನೀಡುತ್ತಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿನಿಯರ ಕೊರತೆಯನ್ನು ನೀಗಿಸುತ್ತಾ ಬಂದಿದೆ, ಉದಾಹರಣೆಯಾಗಿ ಹಿಂದಿ ಭಾಷೆಯ. ಕನಿಷ್ಠ 5 ವಿದ್ಯಾರ್ಥಿನಿಯರು ಇದ್ದರೂ ಪಾಠ ಪ್ರವಚನಕ್ಕೆ ತೊಂದರೆ ಆಗಬಾರದು ಎಂಬ ದೃಷ್ಟಿಕೋನದಿಂದ.
ಸಾವಿರಾರು ರೂಪಾಯಿ ಸಂಬಳವನ್ನು ನೀಡಿ ಪರಿಪೂರ್ಣ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವ ವ್ಯವಸ್ಥೆ ಇರುವುದು ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಎಂಬುದನ್ನ ಪಾಲಕರು ಮತ್ತು ಸಾರ್ವಜನಿಕರು ಗಮನಿಸಬಹುದಾಗಿದೆ. ಸರ್ಕಾರವು ಖಾಸಗಿ ಸಹಭಾಗಿತ್ವದಲ್ಲಿ ವಿದ್ಯಾರ್ಥಿನಿಯರಿಗೆ ಆರ್ಥಿಕ ಬೆಂಬಲವಾಗಿ ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯ. ಹಾಗೂ ಇತ್ತೀಚಿಗೆ ಸರ್ಕಾರವು ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಪ್ರಥಮ ವರ್ಷ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ದೀಪಿಕಾ ಸ್ಕಾಲರ್ಶಿಪ್ (30000 ರೂ) ಸೌಲಭ್ಯವನ್ನು ಸರ್ಕಾರ ವ್ಯವಸ್ಥೆ ಮಾಡಿದೆ.
1)ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ
ಬಿಎ, ಬಿಕಾಂ ವಿದ್ಯಾರ್ಥಿನಿಯರಿಗೆ ಪ್ರಥಮ ವರ್ಷದಿಂದಲೇ ಕೇಂದ್ರ (ಐಎಎಸ್ ಐಪಿಎಸ್ ಇತರೆ,) ಲೋಕಸೇವಾ ಆಯೋಗ ಮತ್ತು ಇತರೆ ಸಾಂಸ್ಥಿಕ ಹುದ್ದೆಗಳ ಪರೀಕ್ಷೆಗಳ ಬಗ್ಗೆ ಮತ್ತು ರಾಜ್ಯದ ಲೋಕಸೇವಾ ಆಯೋಗದ(ಕೆ ಎ ಎಸ್, ಕೆ ಪಿ.ಎಸ್ ಇತರೆ) ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
2)ಉದ್ಯೋಗ ಕೌಶಲ್ಯ ಮತ್ತು ಸ್ವ ಉದ್ಯೋಗ ಪರಿಕಲ್ಪನೆ ಹಾಗೂ ಖಾಸಗಿ ಕಂಪನಿಗಳ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಕಾಲೇಜ್ ಶಿಕ್ಷಣ ಇಲಾಖೆಯು ಕೌಶಲ್ಯ ಆಧಾರಿತ ತರಬೇತಿ ವ್ಯವಸ್ಥೆಯನ್ನು ಸರ್ಕಾರಿ ಕಾಲೇಜುಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ ಅದೇ ರೀತಿ ನಮ್ಮ ಕಾಲೇಜು ಉದ್ಯೋಗ ಮಾಹಿತಿ ಕೋಶದ ಮೂಲಕ ಎಲ್ಲಾ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಲಾಗುತ್ತದೆ.

3) ಪಠ್ಯೇತರ ಚಟುವಟಿಕೆಗಳಲ್ಲಿ ಮುಕ್ತ ಅವಕಾಶ
ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಎನ್‌ಸಿಸಿ, ಯುವರೆಡ್ ಕ್ರಾಸ್, ರೇಂಜರ್ಸ್, ಗಾಯನ ಕೂಟ, ಫಿಲಂ ಕ್ಲಬ್,ರೆಡ್ ರಿಬ್ಬನ್ ಕ್ಲಬ್, ಮುಂತಾದ ಚಟುವಟಿಕೆಗಳಲ್ಲಿ ಮುಕ್ತವಾಗಿ ಅವಕಾಶ ನೀಡಲಾಗುತ್ತದೆ.
4) ವಿಶೇಷ ತರಬೇತಿ
ರಂಗಾಯಣ, ನೀನಾಸಂ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ರಂಗ ತರಬೇತಿ. ಮತ್ತು ಸಹ್ಯಾದ್ರಿ ಉತ್ಸವಕ್ಕೆ ಹಾಗೂ ವಿವಿಧ ಕಾಲೇಜುಗಳಿಗೆ ಸ್ಪರ್ಧೆಗೆ. ಕಳುಹಿಸು ಕೊಡುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.
5) ಮಾನಸಿಕ ಸಾಮರ್ಥ್ಯ ವೃದ್ಧಿಗೆ ಮತ್ತು ಆಪ್ತ ಸಮಾಲೋಚನೆಗೆ ಅವಕಾಶ.
ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಮಾನಸಿಕ ಒತ್ತಡ, ಖಿನ್ನತೆ ನಿವಾರಣೆಗೆ ಮಹಿಳಾ ಮನಶಾಸ್ತ್ರಜ್ಞರಿಂದ ವಿಶೇಷ ಉಪನ್ಯಾಸ ಮತ್ತು ಆಪ್ತ ಸಮಾಲೋಚನೆಯನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
6) ಉಚಿತ ಆರೋಗ್ಯ ತಪಾಸಣಾ ಶಿಬಿರಗಳು
ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನದಂತೆ ವಿವಿಧ ಘಟಕಗಳ ಸಹಯೋಗದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದೊಂದಿಗೆ ದೇಶದ ರಾಜ್ಯದ ಪ್ರತಿಷ್ಠಿತ ವೈದ್ಯರಿಂದ ಆಫ್ಲೈನ್ ಮತ್ತು ಆನ್ಲೈನ್ ಉಪನ್ಯಾಸವನ್ನು ಏರ್ಪಡಿಸಿ ಆರೋಗ್ಯದ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಲಾಗುತ್ತದೆ.
7) ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭ
ಮಾನಸಿಕ ಆಪ್ತ ಸಮಾಲೋಚಕರು, ಯೋಗ ಚಿಕಿತ್ಸೆ, ಇತರೆ ಜ್ಞಾನದ ಕೌಶಲ್ಯವನ್ನು ಹೆಚ್ಚಿಸುವ ಸರ್ಟಿಫಿಕೇಟ್ ಕೋರ್ಸ್ ಗಳನ್ನ ನಮ್ಮ ಕಾಲೇಜಿನಲ್ಲಿ ಆರಂಭಿಸಲಾಗುತ್ತದೆ.
8) ಶೈಕ್ಷಣಿಕ ಅಧ್ಯಯನಕ್ಕಾಗಿ ಸ್ಥಳೀಯ ಮತ್ತು ಅಂತರ್ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡುವುದು
ಶೈಕ್ಷಣಿಕವಾಗಿ ವಿವಿಧ ವಿಭಾಗಗಳಿಂದ
ಶೈಕ್ಷಣಿಕ ಅಧ್ಯಯನಕ್ಕಾಗಿ ಜ್ಞಾನದ ವಿಸ್ತಾರಕ್ಕಾಗಿ ಭೇಟಿ ನೀಡಿ ಮಾಹಿತಿಯನ್ನ ಸಂಗ್ರಹಿಸುವ ಅವಕಾಶವನ್ನು ವಿದ್ಯಾರ್ಥಿನಿಯರಿಗೆ ಕಲ್ಪಿಸಿಕೊಡಲಾಗುತ್ತಿದೆ.
ಪಾಲಕರು ಮತ್ತು ಸಾರ್ವಜನಿಕರಲ್ಲಿ ವಿನಂತಿ ಪಿಯುಸಿ ನಂತರ ಉನ್ನತ ಶಿಕ್ಷಣಕ್ಕೆ ಹೆಣ್ಣು ಮಕ್ಕಳಿಗೆ ಸರ್ಕಾರದ ಸೌಲಭ್ಯದೊಂದಿಗೆ ಅತ್ಯಂತ ಕಡಿಮೆ ಪ್ರವೇಶಾತಿ ಶುಲ್ಕದಲ್ಲಿ ಬಿಎ ಮತ್ತು ಬಿಕಾಂ. ಪದವಿ ಜೊತೆಗೆ ಜ್ಞಾನದ ಕೌಶಲ್ಯವನ್ನು ಹೆಚ್ಚಿಸುವ. ಹೆಣ್ಣು ಮಕ್ಕಳ ಮಾನಸಿಕ. ಆರ್ಥಿಕ, ಸಾಮರ್ಥ್ಯವನ್ನು ಸದೃಢಗೊಳಿಸುವ ಒಂದು ಉತ್ತಮ ಅವಕಾಶವನ್ನು ಕರ್ನಾಟಕ ಸಂಘದ ಪಕ್ಕದಲ್ಲಿ ಇರುವ ಶಿವಮೊಗ್ಗ ನಗರದ ಏಕೈಕ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಪ್ರವೇಶಾತಿ ಹೊಂದಲು ಬಯಸುವ ಹೆಣ್ಣು ಮಕ್ಕಳಿಗೆ ಸದಾ ಸ್ವಾಗತಿಸಲು ಸಿದ್ಧವಾಗಿದೆ.
ಡಾ. ಜಗದೀಶ್ ಬಿದರಕೊಪ್ಪ
ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಶಿವಮೊಗ್ಗ (ಕರ್ನಾಟಕ ಸಂಘದ ಹತ್ತಿರ)
Mail jagadishbidarakoppa@gmail.com
















