
ಆನಂದಪುರ:ಕ್ರಿಯಾಯೋಜನೆ ಇದೆ ಅಂತ ಹೇಳಿ ಮೋಸದಿಂದ ನನ್ನನ್ನು ಕರೆದುಕೊಂಡು ಹೋಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದರು ಇದಕ್ಕೆಲ್ಲ ಮೂಲ ಕಾರಣ ಮುಖಂಡರಾದ ರತ್ನಾಕರ ಹೊನುಗೋಡು ಎಂದು ಯಡೇಹಳ್ಳಿ ಗ್ರಾಂ.ಪಂ.ಅಧ್ಯಕ್ಷೆ ರತ್ನಮ್ಮ ಆರೋಪಿಸಿದರು.
ಇವರು ಇಂದು ಎಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿಯ ಮಹಿಳೆಗೆ ಅಧ್ಯಕ್ಷೆ ಸ್ಥಾನ ದೊರಕಿದೆ ಎಂದು ಯಾರಿಗೂ ಇಷ್ಟವಾಗದ ಕಾರಣ ಎರಡು ತಿಂಗಳಿನಿಂದ ಎಡೇಹಳ್ಳಿ ಗ್ರಾ.ಪಂ ಸಾಮಾನ್ಯ ಸಭೆಗೆ ಸದಸ್ಯರು ಹಾಜರಾಗುತ್ತಿಲ್ಲ ನೋಟಿಸ್ ಜಾರಿ ಮಾಡಿದರು ಇದಕ್ಕೆ ಉತ್ತರಿಸುತ್ತಿಲ್ಲ.

ಬಹಳ ವರ್ಷಗಳಿಂದ ನನಗೆ ಅಧ್ಯಕ್ಷೆ ಸ್ಥಾನವನ್ನು ಕೊಡುತ್ತೇನೆ ಎಂದು ಭರವಸೆ ಕೊಡುತ್ತಾ ಬಂದಿದ್ದರು ಆದರೆ ಆ ಸ್ಥಾನವನ್ನು ನಮಗೆ ಕೊಡಲು ಮುಂದಾಗಲಿಲ್ಲ ಕೊನೆಗೆ ಮಾತಿನಂತೆ ಒಂದು ವರ್ಷಗಳ ಕಾಲ ನನಗೆ ಅಧ್ಯಕ್ಷ ಸ್ಥಾನವನ್ನು ಕೊಡಬೇಕೆಂದು ಮುಖಂಡರಾದ ರತ್ನಾಕರ ಹೊನಗೋಡು ರವರ ಮೂಲಕ ಆಯಿತು.
ಆದರೆ ನನಗೆ ಆರು ತಿಂಗಳ ಕಾಲ ಅಧ್ಯಕ್ಷರನ್ನಾಗಿ ಮಾಡಿದರೂ ಅದನ್ನು ಒಪ್ಪಿಕೊಂಡಿದ್ದೆ ಇದರ ಬಳಿಕ ನಾನು ಅಧ್ಯಕ್ಷೆ ಸ್ಥಾನಕ್ಕೆ ಏರಿದ ಒಂದೇ ತಿಂಗಳಿಗೆ ರಾಜೀನಾಮೆ ನೀಡಿ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರತ್ನಾಕರ ಹೋನಗೋಡು ಒತ್ತಡವನ್ನು ಹೇರಿದರು.
ಒತ್ತಡಕ್ಕೆ ಮಣಿಯದೆ ನಾನು ರಾಜೀನಾಮೆ ನೀಡಲಿಲ್ಲ ಇದರಿಂದ ಕ್ರಿಯಾ ಯೋಜನೆ ಇದೆ ಅಂತ ಹೇಳಿ ಗ್ರಾ.ಪಂ ಸದಸ್ಯರಾದ ನಟರಾಜ್, ಗಣಪತಿ ನನ್ನನ್ನು ಮೋಸದಿಂದ ಕರೆದುಕೊಂಡು ಹೋಗಿ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದರು.

ಮೋಸದಿಂದ ರಾಜೀನಾಮೆ ಕೊಡಿಸಿದ ಕಾರಣ ಪುನಃ ನಾನು ಮೂರು ದಿನಗಳ ಬಳಿಕ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡು ಮುಖಂಡರಾದ ರತ್ನಾಕರ ಹೊನುಗೋಡು ರವರ ಬಳಿ ಮಾತನಾಡಿದೆ ನಾನು ಪರಿಶಿಷ್ಟ ಜಾತಿಯ ಮಹಿಳೆ ಎಂದು ನನ್ನ ಮೇಲೆ ತಾತ್ಸಾರ ಮಾಡುತ್ತಿದ್ದೀರಲ್ಲ ಎಂದು ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿದ ಅವರು ರಾಜೀನಾಮೆ ನೀವು ವಾಪಸು ಪಡೆದುಕೊಂಡಿದ್ದೀರಲ್ಲ ನೀವು ಹೇಗೆ ಸಾಮಾನ್ಯ ಸಭೆ ನಡೆಸುತ್ತೀರಿ, ಆ ಸಭೆಗೆ ಸದಸ್ಯರೆಲ್ಲಾ ಹಾಜರಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಬೇಜವಾಬ್ದಾರಿಯ ಉತ್ತರ ಕೊಟ್ಟರು ಎಂದು ತಿಳಿಸಿದರು.
ಮುಖಂಡರು ಸದಸ್ಯರನ್ನ ಅಧ್ಯಕ್ಷರನ್ನ ಅವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೋ ಇಲ್ಲ ಊರ ಉದ್ಧಾರಕ್ಕೆ ಬಳಕೆ ಮಾಡಿಕೊಳ್ಳುತ್ತಾರೋ ಎಂಬುದು ನನಗೆ ತಿಳಿಯುತ್ತಿಲ್ಲ.
ಅಷ್ಟಕ್ಕೂ ಸದಸ್ಯರಿಗೆ ತಿಳಿಯುವುದಿಲ್ಲವೇ ಪಂಚಾಯತಿಯಲ್ಲಿ ಅಭಿವೃದ್ಧಿಯ ಕಾರ್ಯಗಳ ಕಡೆ ಗಮನಹರಿಸುವುದನ್ನು ಬಿಟ್ಟು ಬಿಟ್ಟಿದ್ದಾರೆ, ಹಾಗೆ ನನ್ನ ಅವಧಿಯಲ್ಲಿ ಯಾವುದೇ ಕೆಲಸ ಕಾರ್ಯವಾಗುತ್ತಿಲ್ಲ ಎಂದು ನನ್ನನ್ನು ದೂಷಿಸುತ್ತಿರುವುದು ಎಷ್ಟು ಸರಿ ಎಂದರು.

ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಗೆ ಆಗುತ್ತಿರುವ ಅವಮಾನ, ಅನ್ಯಾಯ ವನ್ನು ನಾನು ಹೇಳಿಕೊಳ್ಳುತ್ತಿದ್ದೇನೆ ಈ ಹೇಳಿಕೆ ವಿರುದ್ಧವಾಗಿ ಯಾರಾದರೂ ಪ್ರಶ್ನಿಸಿದರೆ ನಾನು ಉತ್ತರ ಕೊಡಲು ಸಿದ್ಧನಿದ್ದೇನೆ ಎಂದು ಕಟುವಾಗಿ ತಿಳಿಸಿದರು.
ನಿರಂತರ ಸುದ್ಧಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








