✒️..ಅಮಿತ್ ಆರ್ ಆನಂದಪುರ
ಸಾಗರ (ಆನಂದಪುರ) ಮೇ28 :ಸಮೀಪದ ಎಡೇಹಳ್ಳಿ ಈದ್ಗ ಮೈದಾನದಲ್ಲಿ ಶುಕ್ರವಾರ ಬಕ್ರೀದ್ ಹಬ್ಬವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗಿನ ಜಾವದಿಂದಲೇ ಮುಸ್ಲಿಂ ಬಾಂಧವರು ಹೊಸ ವಸ್ತ್ರ ಧರಿಸಿ ಈದ್ಗ ಮೈದಾನಕ್ಕೆ ಆಗಮಿಸಿ ವಿಶೇಷ ನಮಾಜ್ ಸಲ್ಲಿಸಿದರು.
ಪ್ರಾರ್ಥನೆಗೂ ಮುನ್ನ ಧಾರ್ಮಿಕ ಮುಖಂಡರು ಬಕ್ರೀದ್ ಹಬ್ಬದ ಮಹತ್ವವನ್ನು ವಿವರಿಸಿ, ತ್ಯಾಗ, ಮಾನವೀಯತೆ, ಸಹೋದರತ್ವ ಹಾಗೂ ಶಾಂತಿಯ ಸಂದೇಶ ಸಾರಿದರು. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆ ಬೆಳೆಸುವ ಅಗತ್ಯವಿದೆ ಎಂದು ಕರೆ ನೀಡಿದರು.
ನಮಾಜ್ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪಿಕೊಂಡು “ಈದ್ ಮುಬಾರಕ್” ಎಂದು ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ಪ್ರಯುಕ್ತ ಬಡವರು ಹಾಗೂ ಅಗತ್ಯವಿರುವವರಿಗೆ ಆಹಾರ ಮತ್ತು ನೆರವು ವಿತರಣೆ ಮಾಡಲಾಗಿದ್ದು, ಮಾನವೀಯತೆ ಮೆರೆದರು. ಈದ್ಗ ಮೈದಾನದಲ್ಲಿ ನೂರಾರು ಭಕ್ತರು ಸೇರಿದ್ದರೂ ಎಲ್ಲೆಡೆ ಶಾಂತಿಯುತ ಹಾಗೂ ಸೌಹಾರ್ದಯುತ ವಾತಾವರಣ ಕಂಡುಬಂತು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಸಮುದಾಯದವರು ಉಪಸ್ಥಿತರಿದ್ದರು .ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಅಗತ್ಯ ಬಂದೋಬಸ್ತ್ ಕಲ್ಪಿಸಿದ್ದರು.
















