Home Shivamogga ಇಂದಿನಿಂದ ಹಲ್ಕೆ-ಮುಪ್ಪಾನೆ ಲಾಂಚ್ ಸ್ಥಗಿತ..!!

ಇಂದಿನಿಂದ ಹಲ್ಕೆ-ಮುಪ್ಪಾನೆ ಲಾಂಚ್ ಸ್ಥಗಿತ..!!

28
0

✒️.. ಅಮಿತ್ ಆರ್ ಆನಂದಪುರ

ಸಾಗರ: ಇಲ್ಲಿನ ಕರೂರು ಹೋಬಳಿಯ ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲ್ಕೆ – ಮುಪ್ಪಾನೆ ಲಾಂಚ್ ಇಂದಿನಿಂದ (ಜೂನ್ 2) ರಿಂದ ಸ್ಥಗಿತಗೊಳಿಸಲಾಗುತ್ತದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಲಾಂಚ್ ಸೇವೆ ನಿಲ್ಲಿಸಲಾಗಿದೆ. ನೀರಿನ ಹರಿವು ಕಡಿಮೆ ಹಿನ್ನೆಲೆಯಲ್ಲಿ ಲಾಂಚ್ ಬಾಟಮ್ ಗೆ ಮರದ ದಿಮ್ಮಿಗಳು ತಾಗಿ ತಾಂತ್ರಿಕ ದೋಷ ಕಂಡು ಬರುತ್ತದೆ. ಜನರ ಸುರಕ್ಷತೆಯ ದೃಷ್ಟಿಯಿಂದ ಸೇವೆ ಸ್ಥಗಿತ ಗೊಳಿಸಲು ನಿರ್ಧರಿಸಲಾಗಿದೆ ಎಂದು ಕಡವು ನಿರೀಕ್ಷಕ ಧನೇಂದ್ರ ಕುಮಾರ್ ತಿಳಿಸಿದ್ದಾರೆ.

ಸಾರ್ವಜನಿಕರು ಹಾಗೂ ಪ್ರವಾಸಿಗರು ಸಮೀಪದ ‘ಸಿಗಂದೂರು ಲಾಂಚ್’ ಸೇವೆ ಮೂಲಕ ಪ್ರಯಾಣಿಸಲು ಮನವಿ ಮಾಡಲಾಗಿದೆ. ಲಾಂಚ್ ಸ್ಥಗಿತದಿಂದ ಕರೂರು ಬಾರಂಗಿ ಹೋಬಳಿಯ ಜನರಿಗೆ ಸಾಕಷ್ಟು ಅನಾನುಕೂಲ ಉಂಟಾಗಲಿದೆ.